Latest

ಭಟ್ಕಳದ ಶಿರಾಲಿ ಚೆಕ್ ಪೋಸ್ಟ್‌ನಲ್ಲಿ 13 ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು

ಭಟ್ಕಳ ತಾಲ್ಲೂಕಿನ ಶಿರಾಲಿ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಲಾರಿಗೆ ತಡೆ ನೀಡಿದ ಸಂದರ್ಭದಲ್ಲಿ, 13 ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ರಾಜಾರೋಷವಾಗಿ ಕೊಂಡೊಯ್ಯಲಾಗುತ್ತಿತ್ತು ಎಂಬುದನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರು ಲಾರಿ ಚಾಲಕನಿಗೆ ದಾಖಲೆಗಳನ್ನು ಕೇಳಿದಾಗ, ಅವನ ಬಳಿ ಯಾವುದೇ ಕಾಗದ ಪತ್ರಗಳಿರಲಿಲ್ಲ. ತಕ್ಷಣವೇ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು, ಜಾನುವಾರುಗಳನ್ನು ರಕ್ಷಿಸಿದರು. ಲಾರಿಯಲ್ಲಿದ್ದ ಉಳಿದ ಮೂವರು ಓಡಿ ತಪ್ಪಿಸಿಕೊಂಡಿದ್ದಾರೆ.

ಲಾರಿಯಲ್ಲಿ ಒಟ್ಟು 9 ಎತ್ತು ಮತ್ತು 4 ಕೋಣಗಳಿದ್ದು, ಅವು ಮಹಾರಾಷ್ಟ್ರದ ಪಾಲೇಗಾಂವ್‌ನಿಂದ ಭಟ್ಕಳದತ್ತ ಸಾಗುತ್ತಿದವು. ಈ ಸಂಬಂಧ, ಔರಂಗಾಬಾದ್ ಜಿಲ್ಲೆಯ ಜಮೀಲ್ ಯೂಸುಫ್ ಶೇಖ್ (49) ಎಂಬಾತನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.

ಈ ಕಾರ್ಯಾಚರಣೆ ಹಿಂದು ಜಾಗರಣ ವೇದಿಕೆಯ ಮಾಹಿತಿ ಆಧಾರದ ಮೇಲೆ ಡಿವೈಎಸ್ಪಿ ಮಹೇಶ್ ಕೆ ಅವರ ಮಾರ್ಗದರ್ಶನದಲ್ಲಿ ಜರುಗಿತು. ಪಿಎಸೈ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ಎಎಸ್‌ಐ ಕೃಷ್ಣಾನಂದ ನಾಯ್ಕ, ಪೊಲೀಸ್ ಸಿಬ್ಬಂದಿ ಬಸವರಾಜ ಡಿ ಕೆ, ಮೋಹನ ಕಬ್ಬೇರ, ವೀರಣ್ಣ ಬಳ್ಳಾರಿ, ಲೋಹಿತ್ ಕುಮಾರ ಎಂ.ಪಿ., ಅಂಬರೀಶ ಕುಂಬಾರಿ ಮತ್ತು ಕಿರಣ ತಿಳಗಂಜಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

kiran

Recent Posts

ತಮಿಳುನಾಡಿನಲ್ಲಿ 14 ವರ್ಷದ ಬಾಲಕಿಗೆ ಬಲವಂತವಾಗಿ ಬಾಲ್ಯ ವಿವಾಹ: ಐದು ಮಂದಿ ಬಂಧನ

ತಮಿಳುನಾಡಿನ ಅಂಚೆಟ್ಟಿ ಗ್ರಾಮದಲ್ಲಿ ತಲೆತಗ್ಗಿಸುವಂತಹ ಅಮಾನವೀಯ ಘಟನೆ ನಡೆದಿದೆ. 14 ವರ್ಷದ ಬಾಲಕಿಗೆ ಬಲವಂತವಾಗಿ ಮದುವೆ ಮಾಡಿ, ಆಕೆಯನ್ನು ಶಾರದಿಯಾಗಿ…

1 hour ago

ವಯಸ್ಕರ ಚಿತ್ರ ನೋಡಿ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಇಂಜಿನಿಯರಿಂಗ್ ಪದವೀಧರ.

ತುಮಕೂರಿನ ಎಸ್‌ಐಟಿ ಪ್ರದೇಶದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದ ಆರೋಪದ ಮೇಲೆ 25 ವರ್ಷದ ಇಂಜಿನಿಯರಿಂಗ್ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಗರ್ಭಿಣಿ ಮಹಿಳೆಯ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಅತ್ಯಾಚಾರ

ರಾಜಸ್ಥಾನದಲ್ಲಿ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಜೈಪುರದಲ್ಲಿ ನಡೆದ ಈ ಭೀಕರ ಘಟನೆಯಲ್ಲಿ, ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ತುಂಬು…

2 hours ago

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ; ಬ್ರಿಟನ್ ಜೈಲಿನಲ್ಲಿ ಸಾವು

ಬ್ರಿಟನ್‌ನ ಜೈಲೊಂದರಲ್ಲಿ 12 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ಮೃತಪಟ್ಟಿದ್ದಾರೆ. 31 ವರ್ಷದ ರೆಬೆಕಾ ಹೊಲ್ಲೊವೇ, ಡರ್ಹಾಮ್‌ನ ಎಚ್‌ಎಂಪಿ ಲೋ…

2 hours ago

ಮರ್ಯಾದಾ ಹತ್ಯೆ: 7 ವರ್ಷಗಳ ಬಳಿಕ ತೀರ್ಪು

ತೆಲಂಗಾಣದ ಮಿರ್ಯಾಲಗುಡದಲ್ಲಿ 2018ರಲ್ಲಿ ನಡೆದ ಪ್ರಣಯ್ ಕುಮಾರ್ ಅವರ ಶೋಚನೀಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಇದೀಗ ನ್ಯಾಯಾಲಯದಿಂದ ಅಂತಿಮ ತೀರ್ಪು…

3 hours ago

ಬಾಲಕಿಯರ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ!: ಆರೋಪಿ ಬಂಧನ

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಿಸ್ತರೆಡ್ಡಿಪೇಟೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಖಾಸಗಿ ಮಹಿಳಾ ಹಾಸ್ಟೆಲ್ನಲ್ಲಿರುವ ರಹಸ್ಯ ಕ್ಯಾಮೆರಾ ಪತ್ತೆಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್…

14 hours ago