ಕಲಬುರಗಿ : ಅಫ್ಜಲ್ಪುರ ತಾಲೂಕಿನ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂತರ ರಾಜ್ಯ ಕಳ್ಳರನ್ನು ಬಂಧಿಸಲಾಗಿದೆ, ಬಂಧಿತರಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳತನವಾದ 30 ಗ್ರಾಂ ಬಂಗಾರದ ಮಂಗಳಸೂತ್ರ, ಒಂದು ಮೊಬೈಲ್ ಹಾಗೂ ನಗದು ಹಣ ಹೀಗೆ ಒಟ್ಟು 1,59,500/- ರೂ. ಕಿಮ್ಮತ್ತಿನ ಮಾಲನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿಕೊಡಲಾಗಿದೆ.