ಮೈಸೂರು ನಗರದ ಕೆ.ಆರ್.ಆಸ್ವತ್ರೆಯ ಸ್ಕಾನಿಂಗ್ ರೂಂ ನಲ್ಲಿ ಸ್ಕಾನಿಂಗ್ ಮಾಡಲು ಅಳವಡಿಸಿದ್ದ ಸುಮಾರು ೪ ಲಕ್ಷ ಬೆಲೆ ಬಾಳುವ Pressure Injector Monitor Tab ಕಳ್ಳತನವಾಗಿದ್ದು ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದಿನಾಂಕ: ೧೩/೦೯/೨೦೨೨ ರಂದು ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ದೇವರಾಜ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಆರೋಪಿಯನ್ನು ದಿನಾಂಕ: ೧೬/೦೯/೨೦೨೨ ರಂದು ದಸ್ತಗಿರಿ ಮಾಡಿ ಆತನಿಂದ ಕಳುವಾಗಿದ್ದ ಸುಮಾರು ೪ ಲಕ್ಷ ಬೆಲೆ ಬಾಳುವ Pressure Injector Monitor Tab ಅನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್, ಐ.ಪಿ.ಎಸ್ ಹಾಗೂ ದೇವರಾಜ ವಿಭಾಗದ ಎ.ಸಿ.ಪಿ ರವರಾದ ಶ್ರೀ ಶಶಿಧರ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿಗಳು ಮಾಡಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

error: Content is protected !!