
ಖಾಸಗಿ ಆಸ್ಪತ್ರೆಯ ದುಬಾರಿ ಬಿಲ್ ನೋಡಿ, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಮ್ಲಜನಕ ಮಾಸ್ಕ್ ಸಮೇತ ಆಸ್ಪತ್ರೆಯಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿದ ಅಪರೂಪದ ಘಟನೆ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ಘಟನೆ ವಿವರ
ದೀನದಯಾಳ್ ನಗರ ನಿವಾಸಿ ಬಂಟಿ, ಗಾಯಗಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವೈದ್ಯರು ಬೆನ್ನು ಮೂಳೆ ಮುರಿದಿದೆ, ತಕ್ಷಣ ಅಪಾಯಕರ ಚಿಕಿತ್ಸೆಗೆ ಅಗತ್ಯವಿದೆ ಎಂದು ಹೇಳಿ, ಕುಟುಂಬದಿಂದ ₹1 ಲಕ್ಷ ಹಣ ಸಂಗ್ರಹಿಸಿ ಚಿಕಿತ್ಸೆಗೆ ಮುಂದಾದರು.
ಆದರೆ, ನಾನು ಕೋಮಾಗೆ ಹೋಗಿರಲಿಲ್ಲ, ಸಣ್ಣಪುಟ್ಟ ಗಾಯಗಳಾಗಿದ್ದವು. ಆಸ್ಪತ್ರೆಯವರು ಹಣ ಸುಲಿಗೆ ಮಾಡಲು ಮೋಸ ಮಾಡುತ್ತಿದ್ದಾರೆ ಎಂದು ಬಂಟಿ ಆರೋಪಿಸಿದ್ದಾರೆ. ಈ ಆಕ್ರೋಶದಿಂದ ಐಸಿಯುವಿನಿಂದ ಪಲಾಯನ ಮಾಡಿ, ನೇರವಾಗಿ ಆಶ್ಪತ್ರೆ ಆವರಣದಲ್ಲಿ ಜನರನ್ನು ಒಟ್ಟುಗೂಡಿಸಿ ಖಾಸಗಿ ಆಸ್ಪತ್ರೆಗಳ ಮೋಸದ ಬಗ್ಗೆ ಎಚ್ಚರಿಸಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ವೀಡಿಯೊ ವೈರಲ್
ಈ ವಿಚಿತ್ರ ಪ್ರತಿಭಟನೆಯ ವಿಡಿಯೋ Amit ಎಂಬ X (ಹಳೆಯ Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ, ಇದುವರೆಗೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ.
In a private hospital in Madhya Pradesh, a patient was tied up, and the family was extorted for money by falsely claiming that he had fallen into a coma. 🙏#Oscars#ChampionsTrophy2025#ViratKohli
— 𝘼𝙢𝙞𝙩 (@AmitYji127) March 5, 2025
ಈ ಘಟನೆ ಖಾಸಗಿ ಆಸ್ಪತ್ರೆಗಳ ದುಬಾರಿ ದರ ಮತ್ತು ರೋಗಿಗಳಿಗೆ ನೀಡುವ ಬಿಲಿಂಗ್ ಕುರಿತಂತೆ ಮತ್ತೊಮ್ಮೆ ಚರ್ಚೆ ಹುಟ್ಟಿಸಿದೆ.