ಹುಬ್ಬಳ್ಳಿ: ವಿಡಿಯೋ ಕಾಲ್‌ ಮಾಡಿ ನಗ್ನ ದರ್ಶನ ಮಾಡಿಸಿದಕ್ಕೆ ನಿವೃತ್ತ ಪ್ರಾಧ್ಯಾಪಕರೊಬ್ಬರು 20 ಲಕ್ಷ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಅಂಜಲಿ ಶರ್ಮಾ ಎಂಬುವರು ಧಾರವಾಡದ ಪ್ರಾಧ್ಯಾಪಕರೊಬ್ಬರಿಗೆ ವಾಟ್ಸ್‌ಆಯಪ್ ವಿಡಿಯೋ ಕರೆ ಮಾಡಿದ್ದಾರೆ, ನಿವೃತ್ತ ಪ್ರಾಧ್ಯಾಪಕರೊಬ್ಬರು ಪರಸ್ಪರ ನಗ್ನ ಚಿತ್ರಗಳನ್ನು ವಿನಿಮಯ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ನಡುವೆ ಆ ಕಡೆಯಿಂದ ಫೋನ್‌ ಮಾಡುತ್ತಿದ್ದ ಬೆಡಗಿ ಒಂದು ದಿನ ಖಾಸಗಿ ವಿಡಿಯೋ, ಫೋಟೋ ಮತ್ತು ವಿಡಿಯೋ ಕರೆಯ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ಹಣವನ್ನು ಕೇಳಿದ್ದಾಳೆ ಎನ್ನಲಾಗಿದೆ. ಆನ್‌ಲೈನ್‌ನಲ್ಲಿ ಹಂತ ಹಂತವಾಗಿ 21 ಲಕ್ಷವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ನಿವೃತ್ತ ಪ್ರಾಧ್ಯಾಪಕರೊಬ್ಬರು ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 

error: Content is protected !!