Crime

ಸ್ಪಾ ಕೇಂದ್ರದಲ್ಲಿ ವೇಶ್ಯವಾಟೆ ಬಯಲು..! ಮೂವರು ಮಹಿಳೆಯರ ರಕ್ಷಣೆ.

ಸ್ಪಾ ಕೇಂದ್ರವೊಂದರಲ್ಲಿ ವೈಧ ವ್ಯವಹಾರದ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯವಾಟೆ ಬಯಲಾಗಿರುವ ಘಟನೆ ಜಿಲ್ಲೆಯ ಪ್ರತಿಷ್ಠಿತ ಹೋಟೆಲ್‌ನಲ್ಲಿ ನಡೆದಿದೆ. ಹಲವು ದಿನಗಳಿಂದ ಈ ಸ್ಪಾದ ಬಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ಶಂಕಾಸ್ಪದ ಮಾಹಿತಿ ಲಭಿಸುತ್ತಿದ್ದ ಹಿನ್ನೆಲೆಯಲ್ಲಿ, ಎಸ್ಪಿ ಡಾ. ವಿಜಯ ಶೋಭರಾಣಿ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ದಂಧೆಯ ಬಗ್ಗೆ ಖಚಿತ ಸುದ್ದಿ ಮೇರೆಗೆ ಸಿಐಇಎನ್ ವಿಭಾಗದ ಪೊಲೀಸರು ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ್ದು, ವೇಶ್ಯಾವಾಟೆಯಲ್ಲಿ ತೊಡಗಿದ್ದ ಬಳ್ಳಾರಿ ಮೂಲದ ಇಬ್ಬರು ಮತ್ತು ಗಂಗಾವತಿಯ ಮೂಲದ ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. ಜೊತೆಗೆ ಸ್ಪಾ ಕೇಂದ್ರವನ್ನು ನಿರ್ವಹಿಸುತ್ತಿದ್ದ ಬಿ.ಎಂಡಿ ಮತೀಲ್ ಹಾಗೂ ಮೈನಜ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇನ್ನಷ್ಟು ಆರೋಪಿಗಳು ಈ ಜಾಲದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ತನಿಖೆ ಮುಂದುವರೆದಿದೆ.

nazeer ahamad

Recent Posts

ಅಪ್ರಾಪ್ತ ಮೌನ ಬಾಲಕಿ ಮೇಲೆ ಕ್ರೂರ ಅತ್ಯಾಚಾರ: ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ”

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ 11 ವರ್ಷದ ಮಾತು ಮಾತಾಡಲಾರದ ಹಾಗೂ ಕಿವಿ ಕೇಳದ ಅಪ್ರಾಪ್ತ ಬಾಲಕಿ ಮೇಲೆ ನಡೆದ…

53 minutes ago

ಸಾಲದ ವಿವಾದದಿಂದ ಗ್ಯಾಂಗ್ ರೇಪ್ ನಾಟಕ: ಹಾವೇರಿ ಮಹಿಳೆಯ ನಕಲಿ ಆರೋಪ ಬಹಿರಂಗ”

ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ವಾಸವಿದ್ದ ಮಹಿಳೆಯೊಬ್ಬಳು ಅತ್ಯಾಚಾರ ಘಟನೆ ನಡೆದಿದೆ ಎಂಬ ನಾಟಕ ರೂಪಿಸಿ ಪೊಲೀಸರಿಗೆ ತೀವ್ರವಾಗಿ ತಲೆನೋವು…

5 hours ago

ಅಶ್ಲೀಲ ವರ್ತನೆಗೆ ಪ್ರಶ್ನೆ ಕೇಳಿದ ಮಹಿಳೆಯ ಪತಿ ಹಾಗೂ ಏಳು ಮಂದಿ ಮೇಲೆ ಹಲ್ಲ: ಆರೋಪಿಗಾಗಿ ಪೊಲೀಸರ ಹುಡುಕಾಟ.

ಬೆಂಗಳೂರು: ನಗರದಲ್ಲೊಂದು ಅಶ್ಲೀಲ ವರ್ತನೆ ಗಂಭೀರ ಹಲ್ಲೆ ಪ್ರಕರಣಕ್ಕೆ ಕಾರಣವಾಗಿದ್ದು, ಸಿಲಿಕಾನ್ ಸಿಟಿಯಲ್ಲಿರುವ ಶಿವಾಜಿನಗರದಲ್ಲಿ ಏಪ್ರಿಲ್ 13ರಂದು ಈ ಘಟನೆ…

17 hours ago

ಮಾಲೂರಿನಲ್ಲಿ ಗಾಂಜಾ ವಶ: ಎರಡು ರಾಜ್ಯದ ಇಬ್ಬರು ಆರೋಪಿಗಳ ಬಂಧನ

ಮಾಲೂರು: ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದ ಸಮೀಪ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 700 ಗ್ರಾಂ ಗಾಂಜಾವನ್ನು ಮಾಲೂರು ಅಬಕಾರಿ ಅಧಿಕಾರಿಗಳು ಬುಧವಾರ…

19 hours ago

ಬಸ್ ಹತ್ತುವ ವಿಚಾರಕ್ಕೆ ಗಲಾಟೆ: ಗದಗ ಜಿಲ್ಲೆಯ ಮುಂಡರಗಿಯಲ್ಲಿ ಕಂಡಕ್ಟರ್ ಮೇಲೆ ಮೂವರಿಂದ ಹಲ್ಲೆ!

ಗದಗ ಜಿಲ್ಲೆ ಮುಂಡರಗಿಯಲ್ಲಿ ಬಸ್ ಹತ್ತುವ ಕುರಿತಂತೆ ನಡೆದ ಮಾತಿನ ಚಕಮಕಿ ಮಾರಾಮಾರಿಗೆ ಕಾರಣವಾಗಿ, ಮೂವರು ಯುವಕರು ಬಸ್ ಕಂಡಕ್ಟರ್…

20 hours ago

ತಾವರಕೆರೆ ಗ್ರಾಮದಲ್ಲಿ ತಾಲಿಬಾನ್ ಶೈಲಿಯಲ್ಲಿ ಮಹಿಳೆಯರ ಮೇಲೆ ಹಲ್ಲೆ.! ಆರು ಮಂದಿ ಬಂಧನ”

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ನಡೆದಿದೆ ಅಮಾನುಷ ಹಲ್ಲೆ ಪ್ರಕರಣ ಮತ್ತೊಮ್ಮೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಪ್ರಮಾಣಿತ…

21 hours ago