ಯಾದಗಿರಿ: ಜಿಲ್ಲೆಯಿಂದ ತೆಲಂಗಾಣದ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಮೋತಕಪಲ್ಲಿ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತರು ತಡೆದಿದ್ದಾರೆ. ಅಕ್ರಮವಾಗಿ ಗೋವುಗಳನ್ನು ಸಾಗಿಸುವುದಲ್ಲದೆ ಒಂದೇ ಬುಲೋರಾದಲ್ಲಿ 07 ಗೋವುಗಳನ್ನು ರಕ್ತ ಬರುವ ಹಾಗೆ ಅತ್ಯಂತ ಕಠೋರವಾಗಿ ಗೋವುಗಳನ್ನು ಕಟ್ಟಿ ಹಾಕಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಮುಧೋಳ ಪೋಲಿಸ್ ಠಾಣೆಯಲ್ಲಿ FIR (crime no.81/2022) ದಾಖಲಾಗಿದೆ.ಈ ಸಂದರ್ಭದಲ್ಲಿ ನಮ್ಮ ಹಿಂದೂ ಕಾರ್ಯಕರ್ತರಾದ ಗಿರೀಶ್ ಕುಲ್ಕರ್ಣಿ ಮೋತಕಪಲ್ಲಿ,ಸಚಿನ್ ದುಗನೂರು,ನಾರಾಯಣ ದುಗನೂರು,ಮಹಾಂತೇಶ್ ಸಾಹುಕಾರ್ ಶಕಲಸಪಲ್ಲಿ,ಸಂಗಮೇಶ್ ಕೆರಳ್ಳಿ ದುಗನೂರು,ಬಸವಂತರೆಡ್ಡಿ ದೇವನೂರು,ಲವಿಕುಮಾರ್ ದುಗನೂರು ಉಪಸ್ಥಿತರಿದ್ದರು.
ವರದಿ ನಾಗರಾಜ್ ಗೊಬ್ಬುರ