ಆಳಂದ ತಾಲೂಕಿನ ಕೊರಳ್ಳಿ ಗ್ರಾಮವೂಂದರಲ್ಲಿ ಮಂಗಳವಾರ ಸಂಜೆ ಸಮಯದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ವ್ಯಸಗಿ ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ಗುರುವಾರ ಬೆಳಗ್ಗೆ 11ಘಂಟೆಯ ಸುಮಾರಿಗೆ ವಿವಿಧ ಮುಖಂಡರು ಕಾರ್ಯಕರ್ತರು ಜಮಾಯಿಸಿ ಸಂಘಟನೆಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಹೆದ್ದಾರಿ ತಡೆದು ಆಳಂದ ಬಸ್ ನಿಲ್ದಾಣದ ಮುಂದೆ ಟಾಯರ್ ಬೆಂಕಿ ಹಚ್ಚಿ ಮಿಂಚಿನ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ವ್ಯಸಗಿ ಕೊಲೆ ಮಾಡಿದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.ಕೂಡಲೆ ಸಂಬಂಧಿತ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಗಲ್ಲಿಗೇರಿಸಬೇಕು ಎಂದು ಜೆ.ಡಿ.ಎಸ್.ಪಕ್ಷದ ಮುಖಂಡರಾದ ಮಹೇಶ್ವರಿ ವಾಲಿಯವರು ಎಂದು ಹೇಳಿದರು. ಅತ್ಯಾಚಾರಿ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ನೌಕರಿ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು. ಸಾರಿಗೆ ಸಂಸ್ಥೆಯ ಬಸ್ ಕರ್ನಾಟಕ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್ ಲಾರಿ ಜೀಪು ಗೂಡ್ಸ್ ಅನೇಕ ವಾಹನಗಳು ಸೇರಿ ವಾಹನಗಳು ಸಂಚಾರ ಕೆಲವು ಸಮಯದ ತನಕ ಕಡಿತಗೊಂಡಿ ಪ್ರಯಾಣಿಕರು ಪರದಾಡಿದರು. ಆಳಂದ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಪಕ್ಷದ ಮುಖಂಡರು, ರಾಜಕೀಯ ಧುರೀಣರು ಮಹಿಳೆಯರು, ಪೋಲಿಸ್ ಸಿಬ್ಬಂದಿಯವರು, ತಸಿಲ್ದಾರರು ಇತರರು ಉಪಸ್ಥಿತರಿದ್ದರು.

error: Content is protected !!