ಕಲಬುರಗಿ-ಪರಿಶಿಷ್ಟ ಜಾತಿಯ ಪೌರ ಕಾರ್ಮಿಕರು, ಖಾಯಂ, ಗುತ್ತಿಗೆ,ಲೋಡರ್ಸ,ಡ್ರೈವರ್ಸ್, ಸಫಾಯಿ ಕರ್ಮಚಾರಿ ಹಾಗೂ ಸ್ಕ್ಯಾವೆಂಜರ್ಸಗಳಿಗೆ ನಿವೇಶನ ಖರೀದಿಗಾಗಿ ಸಹಾಯ ಧನಕ್ಕೆ ಸಂಬಂಧಿಸಿದಂತೆ 2019-20 ರಿಂದ 2023-24 ನೇ ಸಾಲಿನ ವರೆಗೆ ಅನುಷ್ಠಾನಗೊಳ್ಳಲಿರುವ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 2022-23ನೇ ಸಾಲಿಗಾಗಿ ಅರ್ಹ ಹಾಗೂ ಅನರ್ಹ ಫಲಾನುಭವಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಸೂಚನಾ ಫಲಕದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ
ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ 2022ರ ನವೆಂಬರ್ 30 ರೊಳಗಾಗಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಪಾಲಿಕೆ ಕಚೇರಿಯಲ್ಲಿ ಸಲ್ಲಿಸಬೇಕು. ತದನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ವರದಿ ನಾಗರಾಜ್