ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮೆದುಳನ್ನು ತಿಂದು, ತಲೆಬುರುಡೆಯನ್ನು ಬೂದಿಯನ್ನು ಹಾಕಲು ಬಳಸಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಈ ಭೀಕರ ಕೃತ್ಯವನ್ನು ಎಸಗಿದ ವ್ಯಕ್ತಿಯನ್ನು ಅಲ್ವಾರೊ ಎಂದು ಗುರುತಿಸಲಾಗಿದ್ದು, ಈತ ತನ್ನ ಹೆಂಡತಿ ಮಾರಿಯಾ ಮಾಂಟೆಸೆರಾಟ್ಳನ್ನು ಕಳೆದ ವರ್ಷ ಮದುವೆಯಾಗಿದ್ದನು. ಈ ಭಯಾನಕ ಕೃತ್ಯವನ್ನು ನಡೆಸುತ್ತಿರುವಾಗ ಆತ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ.
ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನ ನಂಬಿಕೆ ಇರುತ್ತದೆ. ಇದು ಒಬ್ಬರ ವೈಯಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ. ಆದರೆ ದೇಶಗಳಲ್ಲಿ, ದೆವ್ವ, ಸೈತಾನನನ್ನು ಆರಾಧಿಸುವ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ. ಹಾಗೆಯೇ ಆಲ್ವಾರೋ ಮಾಟ-ಮಂತ್ರವನ್ನು ಅಭ್ಯಾಸ ಮಾಡುತ್ತಿದ್ದ, ಇದನ್ನು ಡೆವಿಲ್ ಆರಾಧನೆ ಎಂದೂ ಕರೆಯುತ್ತಾರೆ.
ತಾನು ಪೂಜಿಸುವ ದೆವ್ವವೇ ಈ ಕೊಲೆ ಮಾಡುವಂತೆ ಆದೇಶಿಸಿದೆ ಎಂದು ಆಲ್ವಾರೋ ಹೇಳಿದ್ದು, ಅದರಂತೆ ಜೂನ್ 29ರಂದು ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕೆಲವು ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಈ ಸೈಕೋ ಹಾಕಿದ್ದನು. ಕೆಲವು ಭಾಗಗಳನ್ನು ಪರ್ವತದ ಮೇಲೆ ಎಸೆದರೆ, ಇನ್ನು ಕೆಲವು ಭಾಗಗಳನ್ನು ಮನೆಯಲ್ಲಿ ಇರಿಸಿಕೊಂಡಿದ್ದ.
ಅಮಲು ಇಳಿದ ಬಳಿಕ ತಾನು ಎಸಗಿರುವ ಕೃತ್ಯವನ್ನು ಕಂಡ ಆಲ್ವಾರೋ, ಎರಡು ದಿನಗಳ ನಂತರ ಅವನು ತನ್ನ ಮಲಮಗನಿಗೆ ಕರೆ ಮಾಡಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಈ ಭೀಕರ ಹತ್ಯೆಯ ಸುದ್ದಿ ಮೆಕ್ಸಿಕೋದಲ್ಲಿ ತಲ್ಲಣ ಮೂಡಿಸಿದೆ.