ಅಳ್ನಾವರ : ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಂಬಾರಗೊಪ್ಪ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಬೃಹತ್ತಾಕಾರದ ನೀರು ಸರಬರಾಜು ಟ್ಯಾಂಕ ಕಾಮಗಾರಿ ಸರಿಯಾದ ಗುಣಮಟ್ಟದ ಮರಳು, ಕಲ್ಲಿನ ಕಡಿ, ಬಳಸುತ್ತಿಲ್ಲ ಬದಲಾಗಿ ಗುತ್ತಿಗೆದಾರ ತನ್ನ ಚಾಣಾಕ್ಷತನದಿಂದ ಮಣ್ಣು ಮಿಶ್ರಿತ ಮರಳು ಬಳಸುತಿದ್ದನೇ ಎಂದು ಸ್ಥಳಿಯ ಸಾರ್ವಜನಿಕರು ಹಾಗೂ ಗ್ರಾಮಪಂಚಾಯತ ಉಪಾದ್ಯಕ್ಷ್ಯರು ಮತ್ತು ಸದಸ್ಯರು ತಿವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಅಗಮಿಸಿದ ಸಹಾಯಕ ತಾಂತ್ರಿಕ ಅಭಿಯಂತರು ಶ್ರೀಮತಿ ಐಶ್ವರ್ಯ ಹೇಗಡೆ ಕಾಮಗಾರಿ ಪರೀಶಿಲಿಸಿ ಗುತ್ತಿಗೆದಾರನಿಗೆ ಸಮಜಾಯಿಸಿದ್ದಾರೆ.
ವರದಿ: ಚರಂತಯ್ಯ ಹಿರೇಮಠ