ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ವಾಹನ ಪಾರ್ಕಿಂಗ್ ವಿಚಾರವಾಗಿ ನಡೆದ ಘಟನೆ ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸ್ ಪೇದೆ ಬಿದರಪ್ಪ ರವಿ ಹಾಗೂ ಸಾರ್ವಜನಿಕನೊಬ್ಬರ ನಡುವೆ ಶುರುವಾದ ಚರ್ಚೆ ಕೆಲವೇ ಕ್ಷಣಗಳಲ್ಲಿ ಉಗ್ರ ಸ್ವರೂಪ ಪಡೆಯಿತು.
ಸಾರ್ವಜನಿಕನು ತನ್ನ ವಾಹನವನ್ನು ನಿಲುಗಡೆ ಮಾಡುತ್ತಿದ್ದ ಸಂದರ್ಭ, ಪೊಲೀಸ್ ಪೇದೆಯು ತಕ್ಷಣ ಪ್ರತಿಕ್ರಿಯೆ ನೀಡಿದ್ದು, ಮಾತಿಗೆ ಮಾತು ಬೆಳೆದು ವಾಗ್ವಾದ ತೀವ್ರಗೊಂಡಿದೆ. ಈ ಸಂದರ್ಭ, ಪೇದೆ ತನ್ನ ಅಧಿಕಾರದ ದುರ್ಬಳಕೆ ಮಾಡಿಕೊಂಡು ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾನೆ ಎಂದು ದೃಶ್ಯಾವಳಿಗಳು ದೃಢಪಡಿಸಿವೆ.
ಅದಕ್ಕೆ ಪ್ರತಿಯಾಗಿ, ಸಾರ್ವಜನಿಕನು ತನ್ನ ಅಪಮಾನವನ್ನು ತಾಳದೆ ಪೇದೆಯ ವಿರುದ್ಧ ಗಂಭೀರವಾಗಿ ಪ್ರಶ್ನೆ ಎಬ್ಬಿಸಿದ್ದಾನೆ. ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರೂ ಈ ಘಟನೆಯನ್ನು ಗಮನಿಸಿ, ಪೇದೆಯ ವರ್ತನೆಯನ್ನು ಖಂಡಿಸಿದರು. ಸಾರ್ವಜನಿಕರ ಒತ್ತಾಯದ ಮೇರೆಗೆ, ಬಿದರಪ್ಪ ರವಿ ತನ್ನ ತಪ್ಪು ಅರಿತು, ಸಾರ್ವಜನಿಕರ ಮುಂದೆ ಕೈ ಮುಗಿದು ಕ್ಷಮೆ ಯಾಚಿಸಿದರು.
ಈ ಘಟನೆ ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸ್ ಸಿಬ್ಬಂದಿಯ ವರ್ತನೆ ಕುರಿತು ಉನ್ನತಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿಬರುತ್ತಿದೆ.
ತ್ರಿಪುರಾದ ಅರ್ತಲಾದಲ್ಲಿ ಭಾರೀ ಪ್ರಮಾಣದ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ಅಧಿಕಾರಿಗಳು, ಬರೊಬ್ಬರಿ 2286.9 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.…
ಚಿತ್ರದುರ್ಗ: ನಟ ದರ್ಶನ್ ಮತ್ತು ಅವರ ತಂಡದವರಿಂದ ಭೀಕರವಾಗಿ ಹತ್ಯೆಯಾದ ರೇಣುಕಾಸ್ವಾಮಿಯ ಕುಟುಂಬದಲ್ಲಿ ಇಂದು ವಿಶಿಷ್ಟ ಸಂಭ್ರಮದ ಜೊತೆಗೆ ಭಾವುಕರ…
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಸಾಮೂಹಿಕ ಮದುವೆಯ ಹೆಸರಲ್ಲಿ ವಂಚನೆ ನಡೆದಿದ್ದು, ವಿವಾಹದ ನಿರೀಕ್ಷೆಯಲ್ಲಿದ್ದ 50ಕ್ಕೂ ಹೆಚ್ಚು ಜೋಡಿಗಳು ಹಾಗೂ ಅವರ ಕುಟುಂಬಗಳು…
ಮಂಡ್ಯ ಜಿಲ್ಲೆಯ ಕಂಬದಹಳ್ಳಿ ಗ್ರಾಮದಲ್ಲಿ ಸಂಭವಿಸಿದ ನಾಡ ಬಾಂಬ್ ಸ್ಫೋಟದ ಪರಿಣಾಮ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಈ ದುರ್ಘಟನೆ ಆಂಜನೇಯ…
ಆಂಧ್ರ ಪ್ರದೇಶದ ಎಲ್ಲೂರು ಜಿಲ್ಲೆಯ ಕಾಮವರಪುಕೋಟ್ ಪಂಚಾಯಿತಿಯ ವಡ್ಲಪಲ್ಲಿ ಗ್ರಾಮದಲ್ಲಿ ಮರುಕಹಾಕುವ ಘಟನೆಯೊಂದು ನಡೆದಿದೆ. 19 ವರ್ಷದ ಬಿ.ಟೆಕ್ ದ್ವಿತೀಯ…
ಶಿರಸಿ-ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಕೊಲೆ ನಡೆದಿದೆ. ಪ್ರಯಾಣಿಕರಿಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶನಿವಾರ ಸಂಜೆ ಅಂಕೋಲಾದಿoದ…