ಲೋಕಪಯೋಗಿ ಇಲಾಖೆಯಲ್ಲಿ 1% ಭ್ರಷ್ಟಾಚಾರಕ್ಕೆ ಬುನಾದಿ ಹಾಕಿರುವ ಕೀರ್ತಿ ಹೊಂದಿರುವ ಪೂರ್ಣಿಮಾ ಪಾಟೀಲ್ ಬಗ್ಗೆ ಕಳೆದ ಸಂಚಿಕೆಯಲ್ಲಿ ವಿಸ್ತಾರವಾಗಿ ಬರೆಯಲಾಗಿತ್ತು ಆದರಂತೆ ಸರ್ಕಾರವೋ? ಹಿರಿಯ ಅಧಿಕಾರಿಗಳೋ ಎಚ್ಚೆತ್ತುಕೊಂಡು ಪೂರ್ಣಿಮಾ ಪಾಟೀಲ್ ರನ್ನ ವರ್ಗಾವಣೆ ಮಾಡಲಾಯಿತು.
ಇಷ್ಟೆಲ್ಲಾ ನಡೆದರೂ ಇದಕ್ಕೂ ನನಗೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ಪೂರ್ಣಿಪಾಟೀಲ್ ತನ್ನ ಚಾಳಿಯನ್ನ ಬಿಡದೆ ವರ್ಗಾವಣೆ ಆಗಿದ್ದರು ಸಹ ಮತ್ತೆ ಅದೇ ಕಚೇರಿಗೆ ಆಗಮಿಸಿ ಸ್ಪಿಲ್ ಓವರ್ ಕೆಲಸಗಳನ್ನ ಕದ್ದು ಮುಚ್ಚಿ ಮಾಡಿ ತನ್ನ ಪಾಲಿನ 1% ವಸೂಲಿ ಮಾಡುವ ಕಾರ್ಯಕ್ರಮಕ್ಕೆ ಅನಧಿಕೃತವಾಗಿ ಶುರು ಮಾಡಿರುವುದು ಪೂರ್ಣಿಮಾ ಪಾಟೀಲ್ ನ ಅಧಿಕಾರ ದಾಹಕ್ಕೆ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು..!!
ಪೂರ್ಣಿಮಾ ಪಾಟೀಲ್ ಹಠಾವೋ!!!
ಲೋಕಪಯೋಗಿ ಇಲಾಖೆಯಲ್ಲಿ ಯಾವ ಕಾನೂನಿಗು ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದಕ್ಕೆ ವರ್ಗಾವಣೆ ಆದರೂ ಅದೇ ಜಾಗದಲ್ಲೇ ಬಂದು ಕುಳಿತಿರುವ ಪೂರ್ಣಿಮಾ ಪಾಟೀಲ್ ಪ್ರಕರಣ ಸಾಕ್ಷಿ. ಇನ್ನಾದರೂ ಹಿರಿಯ ಅಧಿಕಾರಿಗಳು ಪೂರ್ಣಿಮಾ ಪಾಟೀಲ್ ರನ್ನ ಜಾಗ ಖಾಲಿ ಮಾಡಿಸದೆ ಹೋದರೆ ಮುಂದಿನ ಪರಿಣಾಮಗಳನ್ನು ಅಧಿಕಾರಿಗಳೆ ಅನುಭವಿಸಬೇಕಾಗುತ್ತದೆ…