ಕಾರವಾರ: ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಿದೆ.
2022ನೇ ಸಾಲಿನ ಈ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಇರ್ವರಿಗೆ ಪ್ರಶಸ್ತಿ ಲಭಿಸಿದೆ.ಯಕ್ಷಗಾನ ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಹಾಗೂ ಖ್ಯಾತ ಜಾನಪದ ಕಲಾವಿದರಾದ ಶ್ರೀ ಸಹದೇವ ನಡಿಗೇರ್ ಅವರಿಗೆ ಪ್ರಶಸ್ತಿ ದೊರೆತಿರುವುದು ಜಿಲ್ಲೆಯ ಜನತೆ ಹೆಮ್ಮೆ ಪಡುವಂತಾಗಿದೆ..
ಜಾನಪದ ಕಲಾವಿದರಾದ ಶ್ರೀ ಸಹದೇವ ನಡಿಗೇರ ಅವರು ಮುಂಡಗೋಡ ತಾಲೂಕಿನ ಇಂದೂರು ಗ್ರಾಮದವರಾಗಿದ್ದು ಜಾನಪದ ಕ್ಷೇತ್ರದಲ್ಲಿ ತಮ್ಮದೆಯಾದ ವಿಶಿಷ್ಠ ಶೈಲಿಯಿಂದ ಛಾಪುಮೂಡಿಸಿದ್ದಾರೆ.ಮತ್ತು ಪ್ರಸ್ತುತ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಗೆ ಆಯ್ಕೆ ಮಾಡಿರುವುದು ಜಾನಪದ ಕಲೆಗೆ ಸಂದ ಗೌರವವಾಗಿದೆ.
ವರದಿ: ಮಂಜುನಾಥ ಹರಿಜನ.