ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ಯೂಷನ್ ಗೆ ಬರುವಂತೆ ತಿಳಿಸಿ ಕರೆ ಮಾಡಿದ್ದ ಕಾಂತರಾಜು ಬಾಲಕಿ ಬಂದ ನಂತರ ಚಾಕ್ಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರವ್ಯವಸಗಿ ಕೊಲೆ ಮಾಡಿರುತ್ತಾನೆ.
ಟ್ಯೂಷನ್ ಗೆ ಹೋದ ಮಗು ಸಂಜೆಯಾದರೂ ಮನೆಗೆ ಬರದ ಕಾರಣ ಪೋಷಕರು ಹುಡುಕಲು ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ಕಾಂತರಾಜುವನ್ನು ಸಹ ಕೇಳುತ್ತಾರೆ ಆದರೆ ಆತ ನನಗೇನು ಗೊತ್ತಿಲ್ಲ ಎಂದು ಪೋಷಕರ ಜೊತೆಯಲ್ಲಿ ತಾನು ಹುಡುಕಲು ಮುಂದಾಗುತ್ತಾನೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸಮೀಪ ನೀರಿನ ಸಂಪ್ನಲ್ಲಿ ಬಾಲಕಿಯ ಮೃತ ದೇಹ ಬಿದ್ದಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ಮೃತ ದೇಹ ಕಂಡು ಅನುಮಾನಗೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಾರೆ.
ಅತ್ಯಾಚಾರವಾಗಿರುವುದು ಖಚಿತವಾದ ನಂತರ ಕಾಂತರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಎಲ್ಲ ಮಾಹಿತಿ ಹೊರ ಬಿದ್ದಿರುತ್ತದೆ. ಈ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದ್ದು ಮಳವಳ್ಳಿ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿರುತ್ತಾರೆ.
ಮಗುವಿನ ಸಾವಿಗೆ ಇಡಿ ಮಳವಳ್ಳಿ ಜನತೆ ಕಣ್ಣೀರಿಟ್ಟಿದ್ದು ಆರೋಪಿಗೆ ತಕ್ಕ ಶಿಕ್ಷೆ ಕೊಡಬೇಕೆಂದು ಮನವಿ ಮಾಡಿದ್ದಾರೆ.