ಧಾರವಾಡ ಜಿಲ್ಲೆಯ ನವಲಗುಂದ ವ್ಯಾಪ್ತಿಯ ಬಸವೇಶ್ವರನಗರದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯ ಉಪಯೋಗಕ್ಕೆ ತರಿಸಿಕೊಂಡಿದ್ದ ಮಣ್ಣು ರಸ್ತೆಯ ಪಕ್ಕದ ಚರಂಡಿಯಲ್ಲಿ ಬಿದ್ದು ಸ್ಥಳೀಯರ ನಿದ್ದೆ ಕೆಡಿಸುವಂತಾಗಿದೆ ಇದನ್ನು ಸ್ಥಳೀಯ ಗುತ್ತಿಗೆದಾರರು ಹಾಗೂ ನವಲಗುಂದ ಪುರಸಭೆ ಅಧಿಕಾರಿಗಳು ಕಂಡರೂ ಕಾಣದಂತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ . ಕಳೆದ 8-10 ದಿನಗಳಿಂದ ಬಸವೇಶ್ವರ ನಗರದಲ್ಲಿ ಭರದಿಂದ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಇತ್ತೀಚೆಗೆ ಯಾಕೋ ವಿಳಂಬವಾಗಿಬಿಟ್ಟಿದೆ ಮತ್ತು ಈ ಕಾಮಗಾರಿಗೆ ತರಿಸಿಕೊಂದಿದ್ದ ಗರಸು ಮಣ್ಣು ರಸ್ತೆ ಪಕ್ಕದಲ್ಲಿ ಚರಂಡಿಯಲ್ಲಿ ಬಿದ್ದಿದ್ದು ಸ್ಥಳೀಯ ನಿವಾಸಿಗಳು ಪುರಸಭೆ ಅಧಿಕಾರಿಗಳಿಗೆ ಚರಂಡಿಯಲ್ಲಿ ಬಿದ್ದಿರುವ ಮಣ್ಣನ್ನು ತೆಗೆಯಿರಿ ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಸಮಸ್ಯೆ ಆಗುತ್ತದೆ ಎಂದೂ ಕೇಳಿಕೊಂಡರು ಅಧಿಕಾರಿಗಳ ಇತ್ತ ಗಮನ ಹರಿಸುತ್ತಿಲ್ಲ. ಇನ್ನೂ ಮಣ್ಣು ಬಿದ್ದಿರುವ ಈ ಚರಂಡಿಯಲ್ಲಿ ಚರಂಡಿಯ ಮೂಲಕ ಹರಿದುಕೊಂಡು ಬಂದ ಕೊಳಕು ನೀರು ಒಂದೇ ಕಡೆ ಸಂಗ್ರಹವಾಗಿ ಬೆಳಿಗ್ಗೆ ಸಮಯದಲ್ಲಿ ನೊಣಗಳ ಕಾಟ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಈ ಕಾಟದಿಂದ ಸ್ಥಳೀಯ ನಿವಾಸಿಗಳು ಬೇಸತ್ತು ಹಿಡಿ ಶಾಪ ಹಾಕುವಂತಾಗಿದೆ ಅಷ್ಟೇ ಅಲ್ಲದೇ ತಕ್ಷಣ ಈ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಮಣ್ಣು ತಗೆದು ಸ್ಥಳೀಯರಿಗೆ ಸರಿಯಾದ ರಸ್ತೆ ನಿರ್ಮಿಸಿಕೊಡಬೇಕು ಇಲ್ಲವಾದರೆ ಈ ಕಾಮಗಾರಿಯನ್ನೇ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ : ಶಿವು

2 thoughts on “ಹಗಲಿನಲ್ಲಿ ನೊಣ, ರಾತ್ರೀ ಸೊಳ್ಳೆ ಕಾಟದಿಂದ ಬೇಸತ್ತ ನವಲಗುಂದ ನಿವಾಸಿಗಳು.

  1. ನವಲಗುಂದ ತಾಲೂಕು ತಡಾಳ ಗ್ರಾಮ ತಳವಾರ ಓಣಿಯ ನರಗುಂದ ರಸ್ತಕ ಸೇರುವ ತಡಾಳ ಪಂಚಾಯತಿ ಸಿಸಿರೋಡಾದಂತ ಕಾಂಕ್ರೆಟ್ ಕರಣ ರೋಡನ್ನು ಚರಂಡಿ ಗೋಸ್ಕರವಾಗಿ ಜೆಸಿಪಿ ಮುಖಾಂತರ ಅಡ್ಡ ಹೋಗೋದು ಒಂದು ವರ್ಷ ಆಯಿತು ಅದರಲ್ಲಿ ಬೆಳಗಿನ ಜಾವ ನೋಡೋಣ ಸೊಳ್ಳೆ ರಾತ್ರಿ ಟೈಮ್ಸ್ ಸೊಳ್ಳೆ ಹಾವು ಸಣ್ಣಪುಟ್ಟ ಪ್ರಾಣಿಗಳು ಹಂದಿ ಎಲ್ಲವೂ ನೋಡಿ ನೋಡಿ ಜನಕ್ಕೆ ಬೇಸತ್ತು ಹೋಗಿ ಪಂಚಾಯತಿ ತಡಾಳ ಗ್ರಾಮದಲ್ಲಿದ್ದು ಗ್ರಾಮಸ್ಥರು ಎಸ್ ಸಿ ಎಸ್ ಟಿ ಕಾಲೋನಿಯಾದಂತ ಈ ರಸ್ತ ಮೇಲ್ ನರಗುಂದ ಮೇನ್ ಲೈನ್ ಆದಂತ ಸುದ್ದಿಕರಣ ಆಗಿಲ್ಲವೆಂದು ಪಿಡಿಒ ಅಧ್ಯಕ್ಷರು ಸದಸ್ಯರಿಗೂ ವಿನಂತಿ ಮಾಡಿಕೊಂಡರು ಕಾರ್ಯದರ್ಶಿಗಳು ಯಾವುದೇ ಪ್ರಾಜೆಕ್ಟ್ ಯಾವುದೇ ಪ್ರಯೋಜನವಿಲ್ಲ ಇದಕ್ಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಡುತ್ತೇನೆ ಸೊಳ್ಳೆ ನಿಂದ ನಮ್ಮನ್ನ ಮುಕ್ತಾಯ ಮಾಡಿ ನವಲಗುಂದ ತಾಲೂಕು ತಡಾಳ ಗ್ರಾಮ ಕ್ಕೆ ಸಿಸಿ ರೋಡ್ ಮಾಡಿಸಿಕೊಳ್ಳಿ

  2. ನವಲಗುಂದ ತಾಲೂಕು ತಡಾಳ ಗ್ರಾಮ ತಳವಾರ ಓಣಿಯ ನರಗುಂದ ರಸ್ತಕ ಸೇರುವ ತಡಾಳ ಪಂಚಾಯತಿ ಸಿಸಿರೋಡಾದಂತ ಕಾಂಕ್ರೆಟ್ ಕರಣ ರೋಡನ್ನು ಚರಂಡಿ ಗೋಸ್ಕರವಾಗಿ ಜೆಸಿಪಿ ಮುಖಾಂತರ ಅಡ್ಡ ಹೋಗೋದು ಒಂದು ವರ್ಷ ಆಯಿತು ಅದರಲ್ಲಿ ಬೆಳಗಿನ ಜಾವ ನೋಡೋಣ ಸೊಳ್ಳೆ ರಾತ್ರಿ ಟೈಮ್ಸ್ ಸೊಳ್ಳೆ ಹಾವು ಸಣ್ಣಪುಟ್ಟ ಪ್ರಾಣಿಗಳು ಹಂದಿ ಎಲ್ಲವೂ ನೋಡಿ ನೋಡಿ ಜನಕ್ಕೆ ಬೇಸತ್ತು ಹೋಗಿ ಪಂಚಾಯತಿ ತಡಾಳ ಗ್ರಾಮದಲ್ಲಿದ್ದು ಗ್ರಾಮಸ್ಥರು ಎಸ್ ಸಿ ಎಸ್ ಟಿ ಕಾಲೋನಿಯಾದಂತ ಈ ರಸ್ತ ಮೇಲ್ ನರಗುಂದ ಮೇನ್ ಲೈನ್ ಆದಂತ ಸುದ್ದಿಕರಣ ಆಗಿಲ್ಲವೆಂದು ಪಿಡಿಒ ಅಧ್ಯಕ್ಷರು ಸದಸ್ಯರಿಗೂ ವಿನಂತಿ ಮಾಡಿಕೊಂಡರು ಕಾರ್ಯದರ್ಶಿಗಳು ಯಾವುದೇ ಪ್ರಯೋಜನವಿಲ್ಲವೆಂದು ಪಿಡಿಒ ಕಾರ್ಯದರ್ಶಿಗಳು ಇದಕ್ಕೆ ಹೊಣೆಗಾರರು ತಮ್ಮಲ್ಲಿ ವಿನಂತಿ ಮಾಡಿಕೊಡುತ್ತೇನೆ ಸೊಳ್ಳೆ ನಿಂದ ನಮ್ಮನ್ನ ಮುಕ್ತಾಯ ಮಾಡಿ ನವಲಗುಂದ ತಾಲೂಕು ತಡಾಳ ಗ್ರಾಮ ಕ್ಕೆ ಸಿಸಿ ರೋಡ್ ಮಾಡಿಸಿಕೊಳ್ಳಿ

Comments are closed.

error: Content is protected !!