ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಚಂದ್ರಶೇಖರ್ ಹುದ್ದಾರ್, ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿದ್ದಾರೆ. ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದ ಸವಾರನನ್ನು ತಡೆದು, ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ ಲಂಚ ಪಡೆದ ಘಟನೆಯ ವಿಡಿಯೋ ವೈರಲ್ ಆದ ಹಿನ್ನಲೆ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ
ಮೂರು ದಿನಗಳ ಹಿಂದೆ, ಶಿರಸಿಯ ಅಮಿನಳ್ಳಿಯ ಯುವಕರಿಬ್ಬರು ಆಸ್ಪತ್ರೆಗೆ ಹೋಗುವಾಗ, ತಪಾಸಣೆ ನಡೆಸುತ್ತಿದ್ದ ಪೊಲೀಸರು ಅವರನ್ನು ತಡೆದರು. ಚಂದ್ರಶೇಖರ್ ಹುದ್ದಾರ್ ಅವರು ಬೈಕ್‌ಗೆ ವಿಮೆ, ಹೊಗೆ ತಪಾಸಣಾ ಪತ್ರ ಇಲ್ಲದೆ ಇರುವುದನ್ನು ಹಾಗೂ ಸವಾರರು ಹೆಲ್ಮೆಟ್ ಧರಿಸದಿರುವುದನ್ನು ಪ್ರಶ್ನಿಸಿದರು.
ಆರಂಭದಲ್ಲಿ ಅವರ ಮಾತುಗಳು ಪೋಲಿಸರ ಪಾಠ ಶೈಲಿಯಲ್ಲಿತ್ತು –
“ಸಾವಿರ ರೂಪಾಯಿ ದಂಡ ಎದೆ ಹಿಡಿಯಬಹುದು, ಆದರೆ ಹೆಲ್ಮೆಟ್ ಇಲ್ಲದೆ ಅಪಘಾತವಾದರೆ 10-15 ಲಕ್ಷ ರೂ. ಖರ್ಚಾಗಬಹುದು”
“ಹೆಲ್ಮೆಟ್ ಧರಿಸದೆ ಅಪಘಾತವಾದರೆ, ನಿಮ್ಮ ಕುಟುಂಬದವರ ಪರಿಸ್ಥಿತಿ ಹೇಗಾಗಬಹುದು?”
ಈ ಮಾತುಗಳ ಬಳಿಕ, ಅವರು ಕೋರ್ಟಿಗೆ ಕೇಸ್ ಹಾಕಬೇಕೆಂದು ಸೂಚಿಸಿದರು. ಆದರೆ, ಯುವಕರು ತಪ್ಪು ಮಾಡಿದ್ದಾಗಿ ಒಪ್ಪಿಕೊಂಡು ದಂಡವನ್ನು ತಪ್ಪಿಸಲು ಲಂಚ ನೀಡಲು ಪ್ರಯತ್ನಿಸಿದರು.
ಕೊನೆ ಕ್ಷಣದಲ್ಲಿ ಕೈ ಒಡ್ಡಿದ ಕಾನ್ಸ್ಟೇಬಲ್!
ಆರಂಭದಲ್ಲಿ ಲಂಚ ತೆಗೆದುಕೊಳ್ಳಲು ನಿರಾಕರಿಸಿದ್ದ ಚಂದ್ರಶೇಖರ್ ಹುದ್ದಾರ್, ಕೊನೆಗೆ ಆ ಹಣ ಸ್ವೀಕರಿಸಿದರು. ಆದರೆ, ಯುವಕರು ಈ ಎಲ್ಲ ಘಟನೆಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಈ ವೀಡಿಯೋ ವೈರಲ್ ಆದ ಬಳಿಕ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತು.
ಪೊಲೀಸ್ ಇಲಾಖೆ ಕಠಿಣ ಕ್ರಮ
ಪೊಲೀಸ್ ಅಧಿಕೃತ ಬಾಡಿ ಕ್ಯಾಮೆರಾ ಇರಲಿಲ್ಲ – ಇದು ನಿಯಮ ಉಲ್ಲಂಘನೆ
ಲಂಚ ಸ್ವೀಕರಿಸಿದ್ದ ದೃಶ್ಯ ಸಮಾಜ ಮಾಧ್ಯಮಗಳಲ್ಲಿ ಭಾರೀ ಟೀಕೆಗೊಳಪಟ್ಟಿತು
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧೀಕ್ಷಕ ಎಂ. ನಾರಾಯಣ, ಚಂದ್ರಶೇಖರ್ ಹುದ್ದಾರ್ ಅವರನ್ನು ತಕ್ಷಣ ಅಮಾನತು ಮಾಡುವ ಆದೇಶ ಹೊರಡಿಸಿದರು
ಈ ಘಟನೆ, ಲಂಚ ವಿರುದ್ಧದ ಹೋರಾಟಕ್ಕೆ ಮತ್ತೊಂದು ಎಚ್ಚರಿಕೆಯ ಸಂಕೇತವಾಗಿದೆ.
ಗುಜರಾತ್‌ನ ಬನಸ್ಕಾಂಠ ಜಿಲ್ಲೆಯಲ್ಲೊಂದು ಘೋರ ಘಟನೆ ನಡೆದಿದೆ. 2023ರಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡ ಆರೋಪಿ,…
ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಪತ್ನಿಯೇ ತನ್ನ ಪತಿಯನ್ನು ಭೀಕರವಾಗಿ ಹತ್ಯೆ ಮಾಡಿ, ಅಪಘಾತವೆಂದು ತೋರ್ಪಡಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.…
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಕೆ-47 ರೈಫಲ್ ಹಿಡಿದು ಕೊಲೆ ಬೆದರಿಕೆ ಹಾಕಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,…
ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಪಿತೃಸಹಜ ನಂಬಿಕೆಯನ್ನು ತೊಡೆದುಹಾಕುವಂತಹ ಕ್ರೂರ ಕೃತ್ಯ ನಡೆದಿದೆ.…
ಸೋಶಿಯಲ್ ಮೀಡಿಯಾದಲ್ಲಿ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ, ರತನ್ ಧಿಲ್ಲೋನ್, ತಮ್ಮ ಮನೆಯಲ್ಲಿ ಪತ್ತೆಯಾದ ಎರಡು ದಾಖಲೆಗಳ…
ತಿರುವನಂತಪುರಂ (ಕೇರಳ): ಲವ್ ಜಿಹಾದ್ ವಿಚಾರದಲ್ಲಿ ಕೇರಳದ ಮೀನಾಚಿಲ ತಾಲೂಕಿನಲ್ಲಿ ಸುಮಾರು 400 ಕ್ರೈಸ್ತ ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಮಾಜಿ…