ಮುಂಡಗೋಡ: ತಾಲೂಕಿನ ಚಿಗಳಿ ಗ್ರಾಮದ ಶ್ರೀಮತಿ ದೇವಕ್ಕ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಹಾಗೂ ಸಿದ್ದರಾಮೇಶ್ವರ ಯುವಕ ಮಂಡಳ (ರಿ) ಬಿಣಗಾ,ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಗೀತೆ ಮತ್ತು ಕೋಲಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಮತಿ ದೇವಕ್ಕ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ದಾಸಪ್ಪ ಎ ಅವರು ಮಾತನಾಡಿದರು.
ಇವರು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿರುತ್ತದೆ ಹಾಗೂ ಇವುಗಳು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಇವುಗಳನ್ನು ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಗೀತೆಯನ್ನು ವಿನೋದ್ ಗೌಡ ಮತ್ತು ಸಂಗಡಿಗರು ಹಾಡಿದರೆ, ಕೋಲಾಟವನ್ನು ನವೀನ್ ಬಾಗುನವರ ಮತ್ತು ಸಂಗಡಿಗರು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಫಕ್ಕೀರಸ್ವಾಮಿ ಹುಲಿಯರ, ಹಿರಿಯ ಕಲಾವಿದರಾದ ಪುರುಷೋತ್ತಮ ಗೌಡ, ಕಲಾವಿದರಾದ ಜ್ಞಾನದೇವ ಯಲಿವಾಳ, ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ವರದಿ :ಮಂಜುನಾಥ ಹರಿಜನ