ಕುಂದಗೋಳ; ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಸ್ ತಡೆದು ತಮ್ಮ ಆಕ್ರೋಶವನ್ನ ಹೊರಹಾಕಿದರು.

ಪ್ರತಿನಿತ್ಯ ಶಾಲಾ – ಕಾಲೇಜಿನ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವಯೋವೃದ್ಧರು ಹೀಗೆ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಅರಸಿ ಹುಬ್ಬಳ್ಳಿ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ಇದರ ಭಾಗವಾಗಿ ಪ್ರತಿದಿನ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ ಅಂತ ನೆನ್ನೆ ಯರಗುಪ್ಪಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಬಸ್ ತಡೆದು ಪ್ರಯಾಣಿಕರು ಪ್ರತಿಭಟಿಸಿದರು.

ಸಾರಿಗೆ ಬಸ್ ವೊಂದರಲ್ಲಿ ಸುಮಾರು 50 ರಿಂದ 55 ರಷ್ಟು ಕೂಡಲು ಆಸನಗಳ ವ್ಯವಸ್ಥೆ ಇದೆ. ಆದರೆ ಚಿಕ್ಕನರ್ತಿ ಗ್ರಾಮದಿಂದ ಯರಗುಪ್ಪಿ ಮಾರ್ಗವಾಗಿ ಸಂಚಾರಸಬೇಕಾದ ಬಸ್ ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವರು, ನಾವುಗಳು ಸಂಚಾರಸಬೇಕಾದ ಬಸ್ ಲ್ಲಿ ಟಿಕೆಟ್ ತಗಿಸದೆ ಪ್ರಯಾಣ ಬೆಳಸುತ್ತೇವಾ? ನಾವೇನು ದುಡ್ಡು ಕೊಡೋದಿಲ್ಲವಾ.!? ಎಂದು ಪ್ರಶ್ನೆಗಳ ಸುರಿಮಳೆಯೇ ಕೇಳಿ ಬಂತು.

ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಲು ಮೌಖಿಕ ವಾಗಿ ವಿದ್ಯಾರ್ಥಿಗಳು ಅಧಿಕಾರಿಗಳ ಬಳಿ ಚರ್ಚೆಸಿದರೆ ಮನಬಂದಂತೆ ಹಿಗ್ಗಾಮುಗ್ಗಾ ಮಾತಲ್ಲಿ ತಳಿಸಿದ್ದು ಉದಾಹರಣೆಗಳಿವೆ ಅಂತಾರೇ ಇಲ್ಲಿನ ಸಾರ್ವಜನಿಕರು.

ಹಾಗಾದರೆ ಇವರುಗಳಿಗೆ ಪ್ರಶ್ನೆ ಮಾಡೋದು, ಮೂಲ ಸೌಕರ್ಯ ಕೇಳೋದು ತಪ್ಪಾ.!? ಎನ್ನುವುದೇ ಒಂದು ಯಕ್ಷ ಪ್ರಶ್ನೆಯಾಗಿದೆ.

ಗ್ರಾಮಸ್ಥರು ಕೆಲವು ಗಂಟೆಗಳ ಕಾಲ ಬಸ್ ತಡೆದ ಪರಿಣಾಮ ಕುಂದಗೋಳ ಸಾರಿಗೆ ನಿಯಂತ್ರಣಧಿಕಾರಿಗಳು ಮತ್ತು ಪೋಲಿಸ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಸಿ, ಸಾರಿಗೆ ವಿಭಾಗ ಅಧಿಕಾರಿಗಳ ಜೊತೆಗೆ ದೂರವಾಣಿ ಮುಖಾಂತರ ಸಮಸ್ಯೆಗಳ ಬಗ್ಗೆ ವಿವರಿಸಿ, ನಂತರ ಪ್ರತಿಭಟನಾಕಾರರ ಮನವೋಲಿಸಿದರು,

ನಂತರ ಪ್ರಯಾಣಿಕರು ಪ್ರತಿಭಟನೆ ನಿಲ್ಲಿಸಿ ಬಸ್ ಹೋಗಲು ಅನುವು ಮಾಡಿಕೊಟ್ಟರು.

ವರದಿ; ಶಾನು ಯಲಿಗಾರ

error: Content is protected !!