ಬೆಳಗಾವಿ: ಜಿಲ್ಲೆಯ ರಾಯಬಾಗ ಪಟ್ಟಣದ ರೂಪಾಲಿ ಬಾರ್ ನ ಮುಂದಿರುವ ಪಾನ ಶಾಪ್ ನಲ್ಲಿ ಅಕ್ರಮವಾಗಿ ಬಿಪಿ ,ವಿಸ್ಕಿ , ಒರಿಜಿನಲ್ ಚಾಯ್ಸ್ ನಂತಹ ಮದ್ಯವನ್ನು ಅಕ್ರಮವಾಗಿ ಪಾನ್ ಶಾಪ್ ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವುದು ಕಣ್ಣಿಗೆ ಕಂಡು ಕಾಣದಂತೆ ಕುಳಿತಿರುವ ರಾಯಬಾಗ ಅಬಕಾರಿ ಇಲಾಖೆಯ ಅಧಿಕಾರಿಗಳು, ಇಷ್ಟೆಲ್ಲಾ ರಾಜಾರೋಷವಾಗಿ ಮಾರಾಟ ಮಾಡುತ್ತಿರುವುದು ನೋಡಿದರೆ ಇದರಲ್ಲಿ ಅಧಿಕಾರಿಗಳು ಸಹ ಶಾಮೀಲು ಇರುವ ಶಂಕೆ ವ್ಯಕ್ತವಾಗುತ್ತದೆ. ವರದಿ ಕಂಡಮೇಲಾದರು ಅಧಿಕಾರಿಗಳು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳುವರೋ ಇಲ್ಲವೋ ಕಾದು ನೋಡೋಣ.
ವರದಿ:ಸಂಗಪ್ಪ ಚಲವಾದಿ
MSIL ಗಳಲ್ಲಿಯೂ ಸಹ ಮಧ್ಯ ಮಾರಾಟ MRP ಗಿಂತ 10 ರಿಂದ 20 ರೂಪಾಯಿ ಜಾಸ್ತಿ ನೆ ತಗೋತಾ ಇದ್ದಾರೆ ಕೇಳಿದ್ರೆ ಬೇಕಾದ್ರೆ ತಗೋ ಬೇಡಾ ಅಂದ್ರೆ ಬಿಡು ಅಂತಾರೆ….ಹೌದು ಯಾವುವೆ ವಸ್ತು ಗ್ರಾಹಕರ ಕೈ ಗೆ ಸೇರಬೇಕಾದರೆ MRP ಗಿಂತ ಒಂದು ಪೈಸೆ ನು ಕೊಡೋ ಹಾಗಿಲ್ಲ ಅಲ್ವಾ❓
ನೀವು ಎಲ್ಲಾ ಕಡೆ ಸರ್ವೇ ಮಾಡಿ ನೋಡಿ