Cinema

ಸ್ಯಾಂಡಲ್‌ವುಡ್ ನಟಿ ಶರಣ್ಯ ಶೆಟ್ಟಿ ಹೆಸರು ದುರ್ಬಳಕೆ: ವಂಚಕರ ವಿರುದ್ಧ ಸೈಬರ್ ಕ್ರೈಂ ದೂರು

ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ನಟಿ ಶರಣ್ಯ ಶೆಟ್ಟಿ ಹೆಸರು ದುರ್ಬಳಕೆ ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಖದೀಮರು ನಕಲಿ ನಂಬರ್ ಬಳಸಿಕೊಂಡು, ಅದಕ್ಕೆ ನಟಿಯ ಫೋಟೋ ಡಿಸ್ಪ್ಲೇ ಪಿಕ್ಚರ್ (DP) ಇಟ್ಟು, ಜನರಿಂದ ಹಣಕ್ಕೆ ಬೇಡಿಕೆ ಇಡುತ್ತಿರುವುದಾಗಿ ವರದಿಯಾಗಿದೆ. ಈ ಕುರಿತು ಶರಣ್ಯ ಸ್ವತಃ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿಯ ಹೆಸರನ್ನು ಬಳಸಿಕೊಂಡು ವಂಚನೆ ನಡೆಸುತ್ತಿರುವ ಬಗ್ಗೆ ಅವರು ಖುದ್ದಾಗಿ ಸ್ಪಷ್ಟನೆ ನೀಡಿದ್ದಾರೆ. “ನನ್ನ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಆದರೆ, ಆ ನಂಬರ್ ನನ್ನದು ಅಲ್ಲ. ಇದೊಂದು ನಕಲಿ ನಂಬರ್, ದಯವಿಟ್ಟು ಅದನ್ನು ನಂಬಿ ಯಾರು ಹಣ ಕಳುಹಿಸಬೇಡಿ,” ಎಂದು ಶರಣ್ಯ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹಾಗೂ, ವಂಚಕರು ಟ್ರೂ ಕಾಲರ್‌ನಲ್ಲೂ ಶರಣ್ಯ ಶೆಟ್ಟಿ ಹೆಸರನ್ನು ಬಳಸಿ, ಹೀರೋಯಿನ್ಸ್ ಡಿಟೈಲ್ಸ್ ಪಡೆಯಲು ಪ್ರಯತ್ನಿಸುತ್ತಿರುವ ಸಂಗತಿ ಕೂಡ ಬೆಳಕಿಗೆ ಬಂದಿದೆ. ಈ ತಂತ್ರಗಾರಿಕೆಯಿಂದ ಜನರನ್ನು ವಂಚಿಸಲು ಯತ್ನಿಸುತ್ತಿರುವ ಈ ದುಷ್ಕರ್ಮಿಗಳ ವಿರುದ್ಧ ತಾವು ಸೈಬರ್ ಕ್ರೈಂ ಇಲಾಖೆಗೆ ದೂರು ನೀಡುತ್ತಿರುವುದಾಗಿ ನಟಿ ತಿಳಿಸಿದ್ದಾರೆ.

ಜನಪ್ರಿಯ ನಟಿ ಶರಣ್ಯ ಶೆಟ್ಟಿ

ಶರಣ್ಯ ಶೆಟ್ಟಿ, ಕಿರುತೆರೆಯ ‘ಗಟ್ಟಿಮೇಳ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಗಮನ ಸೆಳೆದವರು. ನಂತರ ಅವರು ಹಲವಾರು ಹಿರಿತೆರೆ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ, ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆಯೂ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಘಟನೆ ಸಂಬಂಧ, ಶರಣ್ಯ ಅಭಿಮಾನಿಗಳಿಗೆ ಎಚ್ಚರಿಕೆ ನೀಡುತ್ತಾ, ಯಾವುದೇ ವಂಚನೆಗೊಳಗಾಗದಂತೆ ಜಾಗರೂಕರಾಗುವಂತೆ ಮನವಿ ಮಾಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಮಲ್ಪೆ ಬಂದರಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಇಬ್ಬರು ಆರೋಪಿಗಳು ಬಂಧನ, ಹಾಗೂ ಇಬ್ಬರು ಪೊಲೀಸರ ಅಮಾನತು.!

ಮಲ್ಪೆ ಬಂದರಿಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತಷ್ಟು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ…

14 minutes ago

ಪಾಗಲ್ ಪ್ರೇಮಿ ರಂಪಾಟ: ಲೇಡೀಸ್ ಪಿಜಿಯಲ್ಲಿ ಪ್ರೀತ್ಸೆ, ಪ್ರೀತ್ಸೆ’ ಎಂದು ಪಿಡಿಸುತ್ತಿದ್ದ ಯುವಕ!

ಹಾವೇರಿ: ಇತ್ತೀಚಿಗೆ  ಟ್ರೆಂಡ್ ಆಗಲು ವಿಭಿನ್ನ ಮತ್ತು ವಿಚಿತ್ರ ರೀತಿಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ,…

1 hour ago

ಪುಟ್ಟ ಮಗುವಿನ ಗುದದ್ವಾರಕ್ಕೆ ಖಾರದಪುಡಿ ಹಾಕಿದ ಅಂಗನವಾಡಿಯ ಸಹಾಯಕಿ.!

ಕನಕಪುರದಲ್ಲಿ ನಂಬಲಸಾಧ್ಯವಾದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯೊಬ್ಬಳು ಪುಟ್ಟ ಮಗುವಿನ ಮೇಲೆ ಕ್ರೂರ ಕೃತ್ಯ…

2 hours ago

ಪತ್ನಿಗೆ ಕ್ರೂರವಾಗಿ ಥಳಿಸಿದ ಪಾಪಿ ಪತಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾರುಣ ಘಟನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಅತಿ ಕ್ರೂರವಾಗಿ ಥಳಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆದ…

3 hours ago

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಶಿರಸಿ ನಗರ ಠಾಣೆಯ ಪಿ.ಎಸ್.ಐ ನಾಗಪ್ಪ ಆಯ್ಕೆ

ಶಿರಸಿ ನಗರ ಠಾಣೆ ಪಿಎಸ್ಆಯ್ ನಾಗಪ್ಪ ಬಿ ಇವರಿಗೆ 2022 ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅಯ್ಕೆಯಾಗಿದ್ದಾರೆ.…

15 hours ago

ಭರ್ಜರಿ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟಿ ಸಿಕ್ಕಿಬಿದ್ದ ಕಿರಾತಕರು!

ನಗರದಲ್ಲಿ ಖೋಟಾ ನೋಟು ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಗುರುವಾರ (ಮಾರ್ಚ್ 20) ನಡೆದ ಈ ಘಟನೆ ಮಾಲೀಕರ ಎಚ್ಚರಿಕೆಯ…

17 hours ago