
ಶಿರಸಿ:- ಶಿರಸಿಯ ಹುಲೆಕಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದ ಮೂವರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಸಿಂಗನಹಳ್ಳಿ ಗ್ರಾಮದ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಅದೇ ಊರಿನ ಸುಬ್ರಾಯ ನಾಯ್ಕ್ ಸ್ನೇಹಿತ ರಾಮ ನಾಯ್ಕ ಹಾಗೂ ಬನವಾಸಿ ರಸ್ತೆಯ ಗಡಳ್ಳಿ ಕ್ರಾಸ್ ಬಿಳಿಗಿರಿ ಕೊಪ್ಪದ ಅಬ್ದುಲ್ ಸಾಬ್ ಮೂವರು ಸೇರಿ ಅಕ್ರಮವಾಗಿ ಕಾಡು ಪ್ರವೇಶಿಸಿ ಅಲ್ಲಿದ್ದ ಶ್ರೀಗಂಧದ ಮರ ಕಡಿದು ಆ ಮರವನ್ನು ಹಲವು ತುಂಡುಗಳನ್ನಾಗಿಸಿ ನಂತರ ಅವುಗಳನ್ನು ಕಾಡಿನಿಂದ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಹುಲೇಕಲ್ ವಲಯ ಅರಣ್ಯ ಅಧಿಕಾರಿ ಶಿವಾನಂದ್ ನಿಂಗಾಣಿ ನೇತೃತ್ವದಲ್ಲಿ ದಾಳಿ ಮಾಡಿ 41 ಸಾವಿರ ರೂ ಮೌಲ್ಯದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ವರದಿ: ಮಂಜುನಾಥ್ ಎಫ್ ಎಚ್