ಕೊಟ್ಟೂರು ಪಟ್ಟಣದಲ್ಲಿ ಸರ್ಕಾರದ ಆದೇಶದ ಮೇರೆಗೆ ಅಕ್ಟೋಬರ್ 01 ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಡ್ರೈವ್ ಗೆ ಪಟ್ಟಣ ಪಂಚಾಯಿತಿ ಆಯೋಜಿಸಿದ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಮತ್ತು ಸಂಘ-ಸಂಸ್ಥೆಗಳು ಒಳಗೊಂಡು ಭಾನುವಾರ ಏಕ್ ತಾರಿಕ್ ಏಕ್ ಘಂಟ ಏಕ್ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇದರ ಸಂಬಂಧ ಸರ್ಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಮುಖ್ಯಧಿಕಾರಿ ಎ. ನಸರುಲ್ಲ ರವರು ಸ್ವಚ್ಛತಾ ಡ್ರೈವ್ ಗೆ ಸಮುದಾಯ ಅರೋಗ್ಯ ಕೇಂದ್ರ ಆವರಣವನ್ನು ಸ್ವಚ್ಛತೆ ಮಾಡುವ ಮೂಲಕ
ಏಕ್ ತಾರಿಕ್ ಏಕ್ ಘಂಟ ಏಕ್ ದಿವಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು .
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು ಅನುಷಾ,ಕಂದಾಯ ನಿರೀಕ್ಷಿಕರು ಕೊಟ್ರೇಶ್, ಬೀದಿ ಬದಿ ವ್ಯಾಪಾರಸ್ಥರು, ಆರೋಗ್ಯ ಸಿಬ್ಬಂದಿ ವರ್ಗದವರು ಧರ್ಮಸ್ಥಳ ಸಂಘ ಸಂಸ್ಥೆಯವರು ಇನ್ನು ಮುಂತಾದವರು ಇದ್ದರು.
ವರದಿ:ಮಣಿಕಂಠ.ಬಿ