ಕೊಟ್ಟೂರು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಮಂಗಳವಾರ ಪ್ರೆ :16 ರಂದು ರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಭೆ ನಡೆಯಿತು .ಈ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಭೀಮನಾಯ್ಕ್ ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ನಾಡಿನಾದ್ಯಂತ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿದ್ದಾರೆ ಭಕ್ತಾದಿಗಳಿಗೆ ಯಾವುದೇ ಅಡಚಣೆಗಳು ಉಂಟಾಗದಂತೆ ಎಲ್ಲ ಮೂಲಭೂತ ಸೌಲಭ್ಯಗಳು ಒದಗಿಸುವ ಜವಾಬ್ದಾರಿ ಪ್ರತಿ ಇಲಾಖೆಯ ಕೆಲಸವಾಗಿದೆ ಎಂದು ಹೇಳಿದರು
ಮುಂದಿನ ದಿನಗಳಲ್ಲಿ ಭಕ್ತಾದಿಗಳಿಗೆ ತಾಣವಾಗಿ ಇರುವ ಸುಮಾರು 10ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ಯಾತ್ರೆ ನಿವಾಸ ನಿರ್ಮಿಸಲಾಗುವುದೆಂದು ಭರವಸೆ ನೀಡಿದರು

“ಅಧಿಕಾರಿಗಳಿಗೆ ಸೂಚನೆ ”
ಸುಮಾರು ಐದು ದಿನಗಳ ಕಾಲ ನಡೆಯುವ ರಥೋತ್ಸವ ವೇಳೆಯಲ್ಲಿ ದೂಳು ನಿಯಂತ್ರಣ , ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ವಿದ್ಯುತ್, ಮತ್ತು ಕುಡಿಯುವ ನೀರು, ವ್ಯತಯ ಆಗದಂತೆ, ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಪಟ್ಟಣ ಪಂಚಾಯಿತಿ, ಜೆಸ್ಕಾಂ ಮತ್ತು ಪೊಲೀಸ್ ಇಲಾಖೆ ಮಾನ್ಯ ಜಿಲ್ಲಾಧಿಕಾರಿ ಟಿ ವೆಂಕಟೇಶ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿ ಮಾತನಾಡಿದರು

ಪಾದಯಾತ್ರೆ ಮಾಡುವ ಭಕ್ತಾದಿಗಳ ಆರೋಗ್ಯಕರ ದೃಷ್ಟಿಯಿಂದ ಚಿಕಿತ್ಸೆಗೆ ಮೂರು ತಾಲೂಕಿನ ಟಿಎಚ್ಒ ಸಭೆ ನಡೆಸಿ ಹೆಚ್ಚುವರಿಯಾಗಿ ವೈದ್ಯರನ್ನು ನೇಮಕ ಮಾಡಬೇಕು ಎಂದರು ಹಾಗೂ ಕೂಡ್ಲಿಗಿ , ಹರಪನಹಳ್ಳಿ, ಚಿರಿಬಿ, ಇಟ್ಟಿಗಿ ರಸ್ತೆ ಮಾರ್ಗವಾಗಿ ಬರುವ ಭಕ್ತಾದಿಗಳಿಗೆ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಬೇಕೆಂದು ವೈದ್ಯಧಿಕಾರಿಗಳಿಗೆ ಸೂಚನೆ ನೀಡಿದರು
ಕೆ ಎಸ್ ಆರ್ ಟಿ ಸಿ 80 ಬಸ್ ಗಳ ವ್ಯವಸ್ಥೆ ಕಲ್ಪಿಸುವಂತೆ ಮತ್ತು 150 ಕೆ.ಜಿ ತೂಕದ ದೇವಸ್ಥಾನದ ಬೆಳ್ಳಿ ಬಾಗಿಲು ನಿರ್ಮಾಣಕ್ಕೆ ಟೆಂಡರ್ ಆದೇಶ ನೀಡಿರುವ ಬಗ್ಗೆ ಹಾಗೂ ದೇವಸ್ಥಾನ ಖಾತೆಯಲ್ಲಿ ಇರುವ 5 ಕೋಟಿ ರೂ. ಹಣದಲ್ಲಿ ದೇವರ ಮೂರ್ತಿಯನ್ನು ವಜ್ರದಲ್ಲಿ ಮತ್ತು ಸುತ್ತಲಿನ ಗದ್ದುಗೆಯನ್ನು,ತೊಟ್ಟಿಲನ್ನು ಬಂಗಾರದ ಪ್ಲೇಟ್ ಅಳವಡಿಸುವಂತೆ ಜಿಲ್ಲಾಧಿಕಾರಿ ಬಳಿ ಚರ್ಚಿಸಿದರು.

ಗಾಂಧಿ ಸರ್ಕಲ್ ನಲ್ಲಿ ಬರುವ ಮುಖ್ಯ ರಸ್ತೆಯನ್ನು ಹಾಗೂ ರೇಣುಕಾ ಟಾಕೀಸ್ ಮುಖ್ಯ ರಸ್ತೆಯಲ್ಲಿ ವಾಹನಗಳು ಒಂದೇ ಮಾರ್ಗವಾಗಿ ಸಂಚಾರಿಸುವಂತೆ ಡಿ. ಶಿವಚರಣ ಮನವಿಗೆ ಶಾಸಕರು ಎಲ್ಲವನ್ನು ಪರಿಶೀಲಿಸಿ ಮಾಡುವುದಾಗಿ ತಿಳಿಸಿದರು

ಕೆಲ ವಾರ್ಡ್ಗಳಲ್ಲಿ ವಿದ್ಯುತ್ ಕಂಬಗಳು ಸರಿಪಡಿಸುವಂತೆ ನಾಗರಾಜ್ ಗೌಡ್ರು ತಿಳಿಸಿದಾಗ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಜೆಸ್ಕಾಂ ಅಧಿಕಾರಿಗಳಿಗೆ ಸರಿಪಡಿಸುವುದಾಗಿ ತಿಳಿಸಿದರು

ರಥೋತ್ಸವ ಜರಗುವ ತೇರು ಬಯಲು ರಸ್ತೆಯನ್ನು ಭಕ್ತಾದಿಗಳಿಗೆ ಹಾಗೂ ಅಂಬೇಡ್ಕರ್ ಕಾಲೋನಿಯ ನಿವಾಸಿಗಳಿಗೆ ಸಮಸ್ಯೆ ಆಗದಂತೆ ನಿರ್ಮಿಸಬೇಕು ಎಂದು ಬದ್ದಿ ಮರಿಸ್ವಾಮಿ ಮನವಿಗೆ ಸ್ಪಂದಿಸುವುದಾಗಿ ಶಾಸಕರು ತಿಳಿಸಿದರು

ಪ್ರಕಾಶ್ ರಾವ್ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ನಿರೂಪಿಸಿ ವಂದಿಸಿದರು

error: Content is protected !!