
ಪಾಕಿಸ್ತಾನದ ಕ್ರಿಕೆಟ್ ಇತಿಹಾಸದಲ್ಲಿ ನಜರ್ ಮೊಹಮ್ಮದ್ ಹೆಸರು ಶಾಶ್ವತವಾಗಿದೆ. ಅವರು ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದರೂ, 1952ರಲ್ಲಿ ಭಾರತ ವಿರುದ್ಧ ಅಜೇಯ 124 ರನ್ ಗಳಿಸುವ ಮೂಲಕ ಪಾಕಿಸ್ತಾನದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಜೊತೆಗಿನ ಸಂಬಂಧ ಅವರ ಕ್ರಿಕೆಟ್ ವೃತ್ತಿಗೆ ಕೊನೆ ಹಾಡಿತು ಎಂಬುದು ಕರಾಳ ಸತ್ಯ.
ನೂರ್ ಜಹಾನ್ ಮಾದಕ ಸೌಂದರ್ಯಕ್ಕೆ ಒಳಗಾದ ಕ್ರಿಕೆಟಿಗ!
ನೂರ್ ಜಹಾನ್ ಕೇವಲ ತನ್ನ ಗಾಯನದಿಂದಷ್ಟೇ ಅಲ್ಲ, ಸೌಂದರ್ಯದಿಂದಲೂ ಅನೇಕರನ್ನು ಆಕರ್ಷಿಸುತ್ತಿದ್ದಳು. ಆಕೆಯ ಮೋಹಕ್ಕೆ ಸಿಲುಕಿದವರಲ್ಲಿ ನಜರ್ ಮೊಹಮ್ಮದ್ ಕೂಡ ಒಬ್ಬರು. ಈ ಸಂಬಂಧ ನೂರ್ ಜಹಾನ್ ಸಹೋದರನಾಗಿದ್ದ ಸಂಗೀತ ನಿರ್ದೇಶಕ ಫಿರೋಜ್ ನಿಜಾಮಿ ಅವರ ಮೂಲಕ ಶುರುವಾಗಿತ್ತು. ಇಬ್ಬರೂ ತಮ್ಮ ಪ್ರೀತಿಯನ್ನು ಗುಪ್ತವಾಗಿಟ್ಟರೂ, ನೂರ್ ಜಹಾನ್ ಪತಿ ಶೌಕತ್ ಹುಸೇನ್ ರಿಜ್ವಿ ಅನುಮಾನಗೊಂಡಿದ್ದರು.
ಪೇಕಾಟದ ನಡುವೆಯೇ ಕ್ರಿಕೆಟ್ ವೃತ್ತಿಗೆ ಅಂತ್ಯ!
ಒಂದು ದಿನ ಶೌಕತ್ ಹುಸೇನ್, ನೂರ್ ಜಹಾನ್ ಮತ್ತು ನಜರ್ ಮೊಹಮ್ಮದ್ ಅವರನ್ನು ಮಲಗಿರುವ ಸ್ಥಿತಿಯಲ್ಲಿ ಹಿಡಿದುಬಿಟ್ಟರು. ಪೇಚಿಗೆ ಸಿಲುಕಿದ ನಜರ್, ಬಾಲ್ಕನಿಯಿಂದ ಹಾರಲು ಪ್ರಯತ್ನಿಸಿದಾಗ ತೋಳು ಮುರಿದು ಹೋಯಿತು. ಇದರ ಪರಿಣಾಮ, ಅವರ ಕ್ರಿಕೆಟ್ ವೃತ್ತಿಯೇ ಮುಕ್ತಾಯವಾಯಿತು.
Noor Jehan played a pivotal role in ending Pakistan’s first Test centurion, Nazar Mohammad’s career. Yes, indeed. pic.twitter.com/HkYnYux11P
— Asim Fayaz (@asim_fayaz) April 3, 2016