ಯಾರೊಂದಿಗೂ ಡೇಟ್ ಮಾಡುತ್ತಿಲ್ಲ. ಕಳೆದ 3 ವರ್ಷಗಳಿಂದ ಒಂಟಿಯಾಗಿದ್ದೇನೆ ಎಂದು ನಟಿ ಸುಶ್ಮಿತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಬಾಲಿವುಡ್ ಬ್ಯೂಟಿ ಸುಶ್ಮಿತಾ ಸೇನ್ ಇದೀಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮೌನ ಮುರಿದಿದ್ದಾರೆ.
ನಟಿ ರಿಯಾ ಚಕ್ರವರ್ತಿಗೆ ನೀಡಿದ ಸಂದರ್ಶನದಲ್ಲಿ ಬದುಕಿನ ಹಲವು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ. ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬ್ರೇಕಪ್ ಆದ್ಮೇಲೆ 3 ವರ್ಷಗಳಿಂದ ಸಿಂಗಲ್ ಇದ್ದೇನೆ ಎಂದಿದ್ದಾರೆ. ನನ್ನ ಜೀವನದಲ್ಲಿ ಈಗ ಯಾವುದೇ ಪುರುಷ ಇಲ್ಲ ಎಂದು ಮಾತನಾಡಿದ್ದಾರೆ. 2021ರಿಂದಲೂ ನಾನು ಒಂಟಿ. ನನ್ನ ಜೀವನದಲ್ಲಿ ಕೆಲವು ಅದ್ಭುತವಾದ ಸ್ನೇಹಿತರಿದ್ದಾರೆ. ನಾನು ಅವರಿಗೆ ಕಾಲ್ ಮಾಡಿ ಕಾರಲ್ಲಿ ಗೋವಾಗೆ ಹೋಗೋಣ ಎಂದು ಹೇಳ್ತೀನಿ ಎಂದು ಕಾಯುತ್ತಿರುತ್ತಾರೆ ಎಂದು ನಟಿ ಮಾತನಾಡಿದ್ದಾರೆ.
ಸದ್ಯಕ್ಕೆ ನಾನು ಈ ಬ್ರೇಕ್ ಎಂಜಾಯ್ ಮಾಡುತ್ತಿದ್ದೇನೆ. ನಾನು ಸಿಂಗಲ್ ಆಗಿದ್ರೂ ಯಾರ ಮೇಲೆಯೂ ನನಗೆ ಈ ಕ್ಷಣಕ್ಕೆ ಯಾವುದೇ ಆಸಕ್ತಿ ಬಂದಿಲ್ಲ ಎಂದಿದ್ದಾರೆ ನಟಿ ಸುಶ್ಮಿತಾ.