ಚಿಂತಾಮಣಿ: ಬರ್ತಡೆ ಪಾರ್ಟಿಗೆ ಎಂದು ಯುವಕ ನನ್ನು ಕರೆಸಿಕೊಂಡು ಕಂಟಪೂರ್ತಿ ಕುಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ದುರ್ಗೇಶ್ ಅಲಿಯಾಸ್ ಚಿನ್ನಿ ಎಂಬ ಯುವಕ ಚಿಂತಾಮಣಿಯ ಅಂಜನಿ ಬಡಾವಣೆಯ ನಿವಾಸಿಯಾಗಿರುತ್ತಾನೆ. ಹೇಮಂತ್ ಎಂಬ ಯುವಕನ ಬರ್ತಡೇ ಪಾರ್ಟಿಯನ್ನು ಚಿಂತಾಮಣಿಯ ಕಣ್ಣಂಪಲ್ಲಿ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಆಯೋಜಿಸಿಕೊಂಡಿರುತ್ತಾರೆ ಆ ಸ್ಥಳಕ್ಕೆ ದುರ್ಗೇಶನನ್ನು ಕರೆದೊಗಿರುತ್ತಾರೆ.
ದುರ್ಗೇಶ್ ಮತ್ತು ಹೇಮಂತನಿಗೆ ಹಳೆಯ ವೈಶ್ಯಮ್ಯವಿರುತ್ತದೆ ಆದರೂ ಸಹ ಎಲ್ಲವನ್ನು ಮರೆತು ಬರ್ತಡೇ ಪಾರ್ಟಿಗೆ ಎಂದು ಹೋಗಿರುತ್ತಾರೆ ಆ ಸಂದರ್ಭದಲ್ಲಿ ಶರತ್ ಮಧು ಮಹೇಶ್ ಸೇರಿದಂತೆ ದುರ್ಗೇಶನು ಸಹ ಕಂಠಪೂರ್ತಿ ಕುಡಿದಿರುತ್ತಾರೆ.
ಗುರಾಯಿಸುತ್ತಿದ್ದಾನೆ ಎಂಬ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ ಉಂಟಾಗಿದೆ ಮೊದಲೇ ಹೇಮಂತ ಮತ್ತು ದುರ್ಗೇಶನ ಮಧ್ಯೆ ಹಳೆಯ ವೈಶ್ಯಮ್ಯ ಇದ್ದ ಕಾರಣ ಇದೇ ಸಂದರ್ಭವನ್ನು ಬಳಸಿಕೊಂಡ ಬರ್ತಡೆ ಬಾಯಿ ಹೇಮಂತ ಕೇಕ್ ಕತ್ತರಿಸಲು ತಂದಿದಂತಹ ಚಾಕುವಿನಿಂದ ದುರ್ಗೇಶನ ಕತ್ತು ಕೊಯ್ದಿದ್ದಾನೆ. ಈ ಸಂದರ್ಭದಲ್ಲಿ ಜೊತೆಗಿದ್ದ ಶರತ್, ಮಧು, ಮಹೇಶ್, ಹೇಮಂತನಿಗೆ ಸಾತ್ ನೀಡಿದ್ದಾರೆ.
ಘಟನೆ ನಡೆದ ಮುಂದಿನ ದಿನ ವಿಚಾರ ಬೆಳಕೆಗೆ ಬಂದಿದೆ.
ಕೊಲೆ ಮಾಡಿರುವಂತಹ ಆರೋಪಿಗಳು ತಮಗೇನು ತಿಳಿಯದಂತೆ ಅಮಾಯಕರ ರೀತಿ ವರ್ತಿಸಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇವರನ್ನು ತನಿಖೆಗೆ ಒಳಪಡಿಸಿದ ನಂತರ ಈ ಎಲ್ಲಾ ವಿಚಾರಗಳು ಹೊರಬಂದಿವೆ.
ಬರ್ತಡೆಗೆ ಎಂದು ಕರೆಸಿಕೊಂಡು ಸ್ನೇಹಿತನ ಕತ್ತು ಕೊಯ್ದ ನಾಲ್ವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.