ಶಿರಸಿ:-ಉತ್ತರ ಕನ್ನಡ ಜಿಲ್ಲಾ ಶಿರಸಿ ವೃತ್ತದ ಹೊಸಮಾರುಕಟ್ಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಶ್ರೀ ಹಾರೀಸ ತಂದೆ ಅಬ್ದುಲ್ ಜಬ್ಬಾರ ಖಾನ್ ಉದ್ಯೋಗ-ಅಡಿಕೆ ವ್ಯಾಪಾರ. ಸಾ|| ಕೆಳಗಿನ ಗುಡ್ಡದ ಮನೆ ಶಿರಸಿ. ರವರು ಠಾಣೆಗೆ ಹಾಜರಾಗಿ ದುರು ನೀಡಿದ್ದರು “ದಿನಾಂಕ: 24/12/2024 ರಂದು 22-45 ಗಂಟೆಯಿಂದ ದಿನಾಂಕ:25/12/2024 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕೆಳಗಿನಗುಡ್ಡದಮನೆ ಸಲಾಮತ ನಗರದಲ್ಲಿರುವ ಪಿರ್ಯಾದಿಯ ಸಲಾಮತ ಅರ್ಕನಟ್ ಟ್ರೇಡರ್ಸ್ ಹೆಸರಿನ ಅಡಿಕೆ ಗೋಡಾನಿನ ಶೆಟ್ಟರ್‌ಗೆ ಹಾಕಿದ ಬೀಗ ಮುರಿದು, ನಂತರ ಒಳಗಡೆ ಹೋಗಿ ಚಾಲಿ ಅಡಿಕೆ ತುಂಬಿದ 40 ಕೆ.ಜಿ. ಮತ್ತು 70 ಕೆ.ಜಿ. ತೂಕದ ಎರಡು ಅಡಿಕೆ ಚೀಲ್ ಸುಮಾರು 110ಕೆ.ಜಿ. ತೂಕದ್ದು, ಅ॥ಕಿ॥ 48.400/- ರೂಪಾಯಿಯ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಪೋಲಿಸರು ಆರೋಪಿತರಾದ 1) ಖಾಲೀದ ತಂದೆ ಶರೀಪಸಾಬ ಕನವಳ್ಳಿ, ಸಾ॥ ಆರೆಕೊಪ್ಪ ಗ್ರಾಮ ಶಿರಸಿ. ಹಾಲಿ।। ಇಂದಿರಾನಗರ ಶಿರಸಿ. 2) ಇಕ್ವಾಲ್ ಅಬುತಾಹೀರ ಖಾನ. ಸಾ॥ ಮುಭಾರಕ ಮೆಡಿಕಲ್ಸ್ ಹಿಂದೆ ಶಿರಸಿ. ಇವರನ್ನು ಬಂಧಿಸಿ, ಆರೋಪಿತಳು ಕೃತ್ಯಕ್ಕೆ ಬಳಸಿದ ಸ್ಕೂಟಿ ನಂ:ಕೆಎ-31 ಇಡಿ-9733 ಅಂಕಿ 10.000/- ರೂಪಾಯಿ. ಮತ್ತು ಕಳ್ಳತನ ಮಾಡಿದ ಅಡಿಕೆಯಲ್ಲಿ 90 ಕೆ.ಜಿ. ಅಡಿಕೆ ಅ||ಕಿ 39600/- ರೂಪಾಯಿಯ ಅಡಿಕೆಯನ್ನು ಜಪ್ತ ಪಡಿಸಿಕೊಂಡಿದ್ದು, ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ.
ಶ್ರೀ ನಾರಾಯಣ, ಎಮ್. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ, ಶ್ರೀ ಕೃಷ್ಣಮೂರ್ತಿ, ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ, ಶ್ರೀ ಗಣೇಶ ಕೆ.ಎಲ್ ಮಾನ್ಯ ಪೊಲೀಸ ಉಪಾಧೀಕ್ಷಕರು, ಶಿರಸಿ ಉಪವಿಭಾಗ, ಶ್ರೀ ಶಶಿಕಾಂತ ವರ್ಮಾ, ಮಾನ್ಯ ಪೊಲೀಸ ವೃತ್ತ ನಿರೀಕ್ಷಕರು, ಶಿರಸಿ ವೃತ್ತ ಶಿರಸಿ ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸಮಾರುಕಟ್ಟೆ ಪೊಲೀಸ ಠಾಣೆಯ ಪೊಲೀಸ ಉಪನಿರೀಕ್ಷಕರಾದ ರಾಜಕುಮಾರ ಉಕ್ಕಲಿ ಮತ್ತು ಕುಮಾರಿ ರತ್ನಾ ಕುರಿ ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮಾಹಾಂತೇಶ ಬಾರಕೇರ, ಅಶೋಕ ನಾಯ್ಕ, ಸಂದೀಪ ನಿಂಬಾಯಿ, ರಾಮಯ್ಯ, ಹನುಮಂತ, ರಾಕೇಶ, ಮೋಹನ, ಖಾದರ ರವರು ಭಾಗವಹಿಸಿ ಆರೋಪಿತರನ್ನು ಬಂಧಿಸಲು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು . ಈ ಕಾರ್ಯಾಚರಣೆಯ ಬಗ್ಗೆ ಮಾನ್ಯ ಪೊಲೀಸ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ: ಮಂಜುನಾಥ್ ಎಫ್ ಎಚ್
ಮದುವೆಗೆ ಒಪ್ಪಿಕೊಂಡ ಹೆಂಡತಿ, ಆದರೆ ಮಕ್ಕಳನ್ನು ಮಾಡಿಕೊಳ್ಳಲು ನಿರಾಕರಿಸಿದ್ದಾಳೆ ಎಂದು ಗಂಡನಿಂದ ಪೊಲೀಸರಿಗೆ ದೂರು. ಈ ಪ್ರಕರಣದಲ್ಲಿ ಗಂಡನ ಆರೋಪಗಳ…
ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬಿಜೆಪಿ ಯುವ ಮುಖಂಡ ದೇವು ನಾಯಕ್ (Devu Nayak) ಮೇಲೆ…
ಅಜ್ಜಿ ಎಂದರೆ ನಮ್ಮ ಕಣ್ಣಿಗೆ ಮೂಡುವ ಚಿತ್ರಣವು 60 ವರ್ಷ ಮೇಲ್ಪಟ್ಟ, ಬೆಳ್ಳಿ ಕೂದಲಿನ ಮಹಿಳೆ. ಆದರೆ, 39ನೇ ವಯಸ್ಸಿನಲ್ಲಿ…
ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಬಳಿಕ ಮಹಾರಾಷ್ಟ್ರ ಪೊಲೀಸರು ತೀವ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ (FIR) ಪ್ರತಿಗಳು ಬಹಿರಂಗಗೊಂಡಿದ್ದು,…
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಹೊಸ ತಿರುವು ದೊರಕಿದೆ. ಆಹಾರ…
ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನು ಕಳವು ಆರೋಪ ಮಾಡಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ…