ಅಳ್ನಾವರ: ಸೇನಾ ಭರ್ತಿಗೆಂದು ಆಸ್ಸಾಂಗೆ ತೆರಳಿದ್ದ ಅಭ್ಯರ್ಥಿ ದರ್ಶನ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಅಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ ಬೀಡಕರ್ ಹೃದಯಾಘಾತದಿಂದ ಮೃತಪಟ್ಟ ಯುವಕ ಆಸ್ಸಾಂನ್ನಲ್ಲಿ ಸೇನಾ ಬರ್ತಿ ಪ್ರಾರಂಭವಾಗಿದ್ದ ಬೆನ್ನೆಲೆ ಸೇನೆಗೆ ಸೇರುವ ಉದ್ದೇಶದಿಂದ ದರ್ಶನ್ ಎಂಬ ಈ ಯುವಕ ಸೇನಾ ಬರ್ತಿಗೆಂದು ಆಸ್ಸಾಂಗೆ ತೆರಳಿದ್ದಾನೆ. ದೈಹಿಕ ಪರೀಕ್ಷೆಯ ವೇಳೆ ಅಂದರೆ ರನ್ನಿಂಗ್ ನಲ್ಲಿ ಓಡುವಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಏನಾಗಿದೆ ಎಂದು ನೋಡುವಷ್ಟರಲ್ಲಿ ಹೃದಯಾಘಾತದಿಂದ ದರ್ಶನ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ದರ್ಶನ್ ಪಾರ್ಥಿವ ಶರೀರವನ್ನು ನಿನ್ನೆ ತಡ ರಾತ್ರಿ ಸ್ವಗ್ರಾಮವಾದ ಅರ್ಲವಾಡಕ್ಕೆ ತರಲಾಗಿದೆ. ಮಾರ್ಗ ಮಧ್ಯೆ ಗ್ರಾಮಸ್ಥರಿಂದ ಭಾರತ್ ಮಾತಾ ಕೀ ಜೈ ದರ್ಶನ್ ಅಮರ್ ರಹೇ ಎಂಬ ಭಾವನಾತ್ಮಕ ಘೋಷಣೆಗಳು ಮೊಳಗಿದವು. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ವರದಿ: ಚರಂತಯ್ಯ ಹಿರೇಮಠ