ಆನ್ ಲೈನ್ ವಂಚಕರುಗಳಿಗೆ ಸಾಮಾಜಿಕ ಜಾಲತಾಣಗಳು ಪ್ರತ್ಯಕ್ಷವಾಗಿಯೂ ಅಥವಾ ಪರೋಕ್ಷವಾಗಿಯೊ ಬೆಂಬಲಿಸುತ್ತಿದೆ ಎಂದರೆ ತಪ್ಪಾಗಲಾರದು. ಭ್ರಷ್ಟರ ಬೇಟೆ ಪತ್ರಿಕೆಯ ಕಳೆದ ಸಂಚಿಕೆಗಳಲ್ಲಿ ಆನ್ಲೈನ್ನಲ್ಲಿ ಆಗುತ್ತಿರುವ ವಂಚನೆಗಳ ಬಗ್ಗೆ ತಿಳಿಸಿದ್ದೆವು. ಆನ್ಲೈನ್ ವಂಚಕರು ಆನ್ಲೈನ್ನಲ್ಲಿ ವಂಚನೆ ಮಾಡಬೇಕೆಂದರೆ ಮೊದಲಿಗೆ ಅವರುಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ನೀಡುತ್ತಾರೆ. ಫೇಸ್ಬುಕ್, ಯೂಟ್ಯೂಬ್ ಮತ್ತು ಇನ್‌ಸ್ಟಗ್ರಾಮ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಜಾಹೀರಾತುಗಳು ರಾರಾಜಿಸುತ್ತಿವೆ. ಈ ರೀತಿ ಬರುವಂತಹ ಜಾಹೀರಾತುಗಳಲ್ಲಿ ಹಲವು ಜಾಹೀರಾತುಗಳು ವಂಚಕರಂದೆ ಆಗಿರುತ್ತದೆ. ಉದಾಹರಣೆಗೆ ಎಲೈಟ್(Elite) ಮೇಮಿ(Maime) ಹಾಗೂ ಇನ್ನೂ ಹಲವು ನಕಲಿ ಕಂಪನಿಗಳ ಹೆಸರುಗಳನ್ನು ಬಳಸಿ ಯೂಟ್ಯೂಬ್‌ನಲ್ಲಿ ದುಬಾರಿ ಬೆಲೆಯ ಮೊಬೈಲ್ ಕಡಿಮೆಬೆಲೆಗೆ ಮಾರಾಟಕ್ಕಿದೆ ಎಂದು ಪ್ರಕಟಿಸಿ ಮೊಬೈಲ್ ತಮ್ಮ ಮನೆಗೆ ಕಳುಹಿಸಿಕೊಡುತ್ತೇವೆ ಮೊದಲೇ ಹಣ ಪಾವತಿಸಿ ಎಂದು ಹಾಕಿಕೊಂಡಿರುತ್ತಾರೆ. ೨೦-೩೦ ಸಾವಿರದ ಮೊಬೈಲ್‌ಗಳು ಕೇವಲ ೨ ಅಥವಾ ೩ ಸಾವಿರಕ್ಕೆ ಸಿಗುತ್ತಿದೆ ಎಂದು ಅಮಾಯಕರು ಆಸೆಪಟ್ಟು ಹಣವನ್ನು ಪಾವತಿಸಿ ವಂಚಕರ ಬಲೆಗೆ ಬೀಳುತ್ತಾರೆ. ಮೊಬೈಲ್ ವಿಚಾರದಲ್ಲಿ ಮಾತ್ರವೇ ಅಲ್ಲದೆ ಹಲವು ರೀತಿಯ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟು ವಂಚಿಸುತ್ತಾರೆ. ಯೂಟ್ಯೂಬ್‌ನಲ್ಲಿ ಮಾತ್ರವೇ ಅಲ್ಲದೆ ಫೇಸ್ಬುಕ್ ಮ
ಆನ್ಲೈನಲ್ಲಿ ವಂಚಕರು ಹೆಚ್ಚಾದಂತೆಲ್ಲ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಇಂತಹ ಪ್ರಕರಣಗಳನ್ನು ಬೇಧಿಸಲು ಸೈಬರ್ ಕ್ರೈಮ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನೂರು ಜನ ಮೋಸ ಹೋದವರಲ್ಲಿ ೫ ರಿಂದ ೧೦ ಜನರಿಗೆ ಮಾತ್ರ ಸೈಬರ್ ಕ್ರೈಮ್ ಪೊಲೀಸರು ನ್ಯಾಯ ಕೊಡಿಸಲು ಅಥವಾ ವಂಚಕರನ್ನು ಹಿಡಿದು ನೊಂದವರ ಹಣವನ್ನು ಹಿಂದಿರುಗಿಸಲು ಸಾಧ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಮಾಡುತ್ತಿರುವ ಎಡವಟ್ಟಿನಿಂದ ಸೈಬರ್ ಕ್ರೈಮ್ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಏನಾದರೂ ಸೈಬರ್ ಕ್ರೈಮ್ ಪೋಲಿಸರಿದ್ದಾರೆ ಎಂಬುವ ಧೈರ್ಯದಿಂದ ಸಾಮಾನ್ಯ ಜನರು ಎಡವಟ್ಟು ಮಾಡಿಕೊಳ್ಳುವ ಮೊದಲು ತಮ್ಮ ಎಚ್ಚರಿಕೆಯಲ್ಲಿ ತಾವಿರಿ. ಒಮ್ಮೆ ಹಣ ಕಳೆದುಕೊಂಡ ಮೇಲೆ ಅದನ್ನು ಹಿಂಪಡೆಯುವುದು ಕಷ್ಟಸಾಧ್ಯ. ಆದಕಾರಣ ಪ್ರತಿ ಬಾರಿ ಹೇಳುವಾಗೆ ಈ ಬಾರಿಯೂ ಮತ್ತೊಮ್ಮೆ ಹೇಳುತ್ತಿದ್ದೇವೆ ಅವಶ್ಯಕತೆ ಇಲ್ಲದಂತಹ ಜಾಹೀರಾತುಗಳನ್ನು ಸುಮ್ಮನೆ ಒಮ್ಮೆ ನೋಡೋಣ ಎಂದು ಭಾವಿಸಿ ಕ್ಲಿಕ್ಕಿಸಿ ಮೋಸ ಹೋಗದಿರಿ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…