ಕಲಬುರಗಿ: ಭಾರತ ಸರ್ಕಾರವು ಸ್ವಚ್ಛತೆಗೆ ಅಂತ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛ ಭಾರತ ಅಭಿಯಾನದ ಮೂಲಕ ದ್ವಿಚಕ್ರ ವಾಹನ ಕೂಡ ಪ್ರತಿ ಗ್ರಾಮ ಪಂಚಾಯಿತಿ ಗೆ ನೀಡಲಾಗಿದೆ. ಆದರೆ ಅದು ಸರಿಯಾಗಿ ಉಪಯೋಗ ಆಗುತ್ತಿಲ್ಲ ಎಂಬುದು ಕಂಡುಬರುತ್ತದೆ.

ಸ್ವಚ್ಛತೆ ಬಗ್ಗೆಯೇ ತಿರುಗಿ ನೋಡದ ಪಿಡಿಒ ಇನ್ನೂ ಗ್ರಾಮ ಅಭಿವೃದ್ಧಿ ಮಾಡ್ತಾ ಇದ್ದಾನೆ. ಎಂದರೆ ನಂಬಲಾಗದ ವಿಷಯ ಗ್ರಾಮ ಪಂಚಾಯಿತಿ ಯ ಅಭಿವೃದ್ಧಿ ಅಧಿಕಾರಿಯಾದ ನಾಗೇಂದ್ರಪ್ಪ ಪಿಡಿಒ ಅವರು ಗ್ರಾಮ ಪಂಚಾಯಿತಿ ದುಡ್ಡು ಹೊಡೆಯುವ ಕೆಲಸ ಮಾತ್ರ ಮಾಡುತ್ತಾರೆ ಎಂಬ ಮಾತು ಅಲ್ಲಲ್ಲಿ ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ.ಅಷ್ಟಕ್ಕೂ ಹೇಳಲು ಹೊರಟಿರುವ ವಿಷಯ ಏನಂದರೆ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮ ಪಂಚಾಯಿತಿ ಹೊಂದಿರುವ ಗ್ರಾಮದ ದುಸ್ಥಿತಿ ಇದು. ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂದಗಡೆ.ಸ್ವಚ್ಛತೆ ಕಾಣದೆ ಆಸ್ಪತ್ರೆಗೆ ಹೋಗುತ್ತಿದ್ದಾರೆ ಜನರು ರೋಗ ತೆಗೆದುಕೊಂಡು ಹೋಗುವ ಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ.

ಅದು ಹಂದಿಗಳ ತಾಣವಾಗಿದೆ.ಸರ್ಕಾರಿ ಶಾಲೆಯ ಹಿಂದೆಗಡೆ ಐಬಿ ಯಿಂದ ಹೋಗುವ ರಸ್ತೆ ಚರಂಡಿ ಭಾನು ಭಗವಾನ್ ಮನೆ ಹತ್ತಿರ ಹಾಗೂ ಗ್ರಾಮದಲ್ಲಿ ಇಂತಹ ದುಸ್ಥಿತಿ ಇದೆ. ಅದು ಪಿಡಿಓ ನಾಗೇಂದ್ರಪ್ಪ ಅವರಿಗೆ ಕಾಣಲಿಲ್ಲವೇ!? ಎಂಬುದು ಪ್ರಶ್ನೆಯಾಗಿದೆ. ಮತ್ತು ಗ್ರಾಮದಲ್ಲಿ ಅನೇಕ ಓಣಿಯಲ್ಲಿ ಗಬ್ಬೆದ್ದು ರಸ್ತೆಯಲ್ಲ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಸಿ ಚರಂಡಿ ಒಳಗಡೆ ಕಸದ ರಾಶಿ ರಾಶಿ ಬಿದ್ದಿದ್ದು ಕಾಣಲಿಲ್ಲವಾ ಎಂಬುವುದು ಶೋಚನೀಯ ವಿಷಯ ಗ್ರಾಮದ ಕೆಲವೊಂದು ಕಡೆ ರಸ್ತೆಗಳೇ ಚರಂಡಿಮಾಯ ಆಗಿದ್ದರು.ಈ ಕಡೆ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸುತ್ತಿಲ್ಲ.

ಕಳೆದ ಒಂದು ವರ್ಷಗಳಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿದ್ರು ಕೂಡ ಅವರು ಇತ್ತ ಗಮನ ಹರಿಸದೆ ಇದ್ದಾರೆ ಎಂಬುದು ಅಲ್ಲಿನ ಜನರ ಅಭಿಪ್ರಾಯ. ಗ್ರಾಮದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವರದಿ ನೋಡಿಯಾದರೂ ಗ್ರಾಮದ ಸುರಕ್ಷತೆಯ ಬಗ್ಗೆ ಅರಿವೇ ಇಲ್ಲದ ಪಿಡಿಓ. ನಾಗೇಂದ್ರಪ್ಪ ಅವರು ಸ್ವಚ್ಛತೆ ಕಡೆಗೆ ಗಮನ ಹರಿಸುತ್ತಾರೆ ಎಂಬುದನು ಕಾದು ನೋಡೋಣ.

ವರದಿ:ಸಂಗಪ್ಪ ಚಲವಾದಿ

error: Content is protected !!