Latest

ಸ್ವಂತ ತಾಯಿಯ ಶವಸಂಸ್ಕಾರಕ್ಕೆ 40 ಲಕ್ಷ ಬೇಡಿಕೆ ಇಟ್ಟ ಪುತ್ರರು.

ದೊಡ್ಡ ಕುರುಗೋಡು ಗ್ರಾಮದ ಅನಂತಕ್ಕ ಎಂಬ ವೃದ್ಧೆಯ ಶವಸಂಸ್ಕಾರಕ್ಕೆ ಆಕೆಯ ಪುತ್ರರು ₹40 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ತಾಯಿ ಶವವನ್ನು ಜಮೀನಿನಲ್ಲಿ ತಂದೆಯ ಸಮಾಧಿ ಪಕ್ಕದಲ್ಲಿ ಹೂಳಲು ನಿರ್ಧರಿಸಿದ ಅನಂತಕ್ಕನ ನಾಲ್ವರು ಪುತ್ರಿಯರು, ಶವವನ್ನು ಸ್ವಂತ ಗ್ರಾಮಕ್ಕೆ ತಂದು ಹೊಲದಲ್ಲಿ ಇರಿಸಿದರು. ಆದರೆ, ಅವರ ಇಬ್ಬರು ಸಹೋದರರು ತಾಯಿಯ ಅಂತ್ಯಸಂಸ್ಕಾರಕ್ಕೆ ₹40 ಲಕ್ಷ ನೀಡುವಂತೆ ಪಟ್ಟು ಹಿಡಿದರು. ಇದರಿಂದಾಗಿ, ವೃದ್ಧೆಯ ಶವ ಹೊಲದಲ್ಲಿ ಗಂಟೆಗಳ ಕಾಲ ಬಿಸಿಲಿನಲ್ಲಿ ಉಳಿಯಬೇಕಾಯಿತು.

ಹೀನಾಯ ವರ್ತನೆಯನ್ನು ತಾಳಲಾರದ ಪುತ್ರಿಯರು ತಾಯಿಯ ಶವವನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಕೊಂಡೊಯ್ದು, ಸಹೋದರರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿದರು.

ಪರಿಹಾರದ ಹಣವೇ ವೈಮನಸ್ಸಿಗೆ ಕಾರಣ

ಅನಂತಕ್ಕ ಅವರ ಹೆಸರಿನಲ್ಲಿ ಇದ್ದ ಎರಡು ಎಕರೆ ಜಮೀನನ್ನು ಕೈಗಾರಿಕಾ ಬಳಕೆಗೆ ಕೆಐಎಡಿಬಿ ವಶಪಡಿಸಿಕೊಂಡು, ಇದಕ್ಕೆ ₹90 ಲಕ್ಷ ಪರಿಹಾರ ನೀಡಿತ್ತು. ಈ ಹಣವನ್ನು ಇಬ್ಬರು ಪುತ್ರರು ಸಮನಾಗಿ ಹಂಚಿಕೊಂಡಿದ್ದರು. ಆದರೆ, ನಾಲ್ವರು ಪುತ್ರಿಯರು ನ್ಯಾಯಾಲಯದ ಮೊರೆ ಹೋಗಿ ತಮ್ಮ ಪಾಲಿನ ಹಣವನ್ನು ಪಡೆದಿದ್ದರು. ಈಗ, ಅದೇ ಹಣವನ್ನು ವಾಪಸ್ ನೀಡುವಂತೆ ಇಬ್ಬರು ಪುತ್ರರು ಒತ್ತಾಯಿಸುತ್ತಿದ್ದರೆ, ಈ ಬಗ್ಗೆ ವೃದ್ಧೆಯ ಮೊಮ್ಮಗಳು ಶಾಂತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಷಯ ತಹಶೀಲ್ದಾರ್ ಮಹೇಶ್ ಎಸ್. ಪತ್ರಿ ಅವರ ಗಮನಕ್ಕೆ ಬಂದ ಕೂಡಲೇ ಅವರು ಸ್ಥಳಕ್ಕೆ ಆಗಮಿಸಿ ಮೃತರ ಎಲ್ಲಾ ಮಕ್ಕಳೊಂದಿಗೆ ಚರ್ಚಿಸಿ, ಅಂತಿಮವಾಗಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದರು.

kiran

Recent Posts

ಬಾಲಕಿಯರ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ!: ಆರೋಪಿ ಬಂಧನ

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಿಸ್ತರೆಡ್ಡಿಪೇಟೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಖಾಸಗಿ ಮಹಿಳಾ ಹಾಸ್ಟೆಲ್ನಲ್ಲಿರುವ ರಹಸ್ಯ ಕ್ಯಾಮೆರಾ ಪತ್ತೆಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್…

8 hours ago

100 ರೂ ಕೊಡಲಿಲ್ಲವೆಂದು ಸಾಮೂಹಿಕ ಅತ್ಯಾಚಾರ ಪ್ರಕರಣ; ಇಬ್ಬರು ಆರೋಪಿಗಳ ಬಂಧನ!

ಕೊಪ್ಪಳದ ಗಂಗಾವತಿ ಬಳಿ ನಡೆದ ವಿದೇಶಿ ಮಹಿಳೆ ಹಾಗೂ ಹೋಮ್‌ಸ್ಟೇ ಮಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ…

2 days ago

ಅರಸೀಕೆರೆ ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಅತ್ಯಾಚಾರ, ಕೊಲೆ: ಆರೋಪಿಯ ಬಂಧನ

ಅರಸೀಕೆರೆ ರೈಲ್ವೆ ಪೊಲೀಸರು ತೀವ್ರ ತನಿಖೆ ನಡೆಸಿ, ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಹತ್ಯೆ…

2 days ago

ಖಾಸಗಿ ಆಸ್ಪತ್ರೆಯ ಬಿಲ್‌ ಶಾಕ್: ಕೋಮಾದಲ್ಲಿದ್ದ ವ್ಯಕ್ತಿ ಐಸಿಯುನಿಂದ ನೇರವಾಗಿ ಪ್ರತಿಭಟನೆಗೆ

ಖಾಸಗಿ ಆಸ್ಪತ್ರೆಯ ದುಬಾರಿ ಬಿಲ್ ನೋಡಿ, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಮ್ಲಜನಕ ಮಾಸ್ಕ್ ಸಮೇತ ಆಸ್ಪತ್ರೆಯಿಂದ ಹೊರಗೆ ಬಂದು…

2 days ago

ಪತ್ನಿಯ ತೂಕ ಹೆಚ್ಚಾದರೆಂದು ಪತಿ ಹಲ್ಲೆ: ಬೆಂಗಳೂರಿನಲ್ಲಿ ಅಮಾನವೀಯ ಘಟನೆ

ಬೆಂಗಳೂರು ನೆಲಗದರನಹಳ್ಳಿಯಲ್ಲಿ ಪತಿ ಪತ್ನಿಯ ಸೌಂದರ್ಯ ಕುರಿತು ಟೀಕಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪತಿ ಪುಲಿ…

2 days ago

ವಿಮಾನದಲ್ಲಿ ಮಹಿಳೆ ಬೆತ್ತಲೆ ಹಾವಳಿ ವಿಡಿಯೋ ವೈರಲ್: ವಿಮಾನ ಹಿಂತಿರುಗಿದ ಘಟನೆ..!

ಹ್ಯೂಸ್ಟನ್‌ನಿಂದ ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 733ನಲ್ಲಿ ನಡೆದ ಅಹಿತಕರ ಘಟನೆಯಿಂದ ಪ್ರಯಾಣಿಕರು ತೀವ್ರ ಆತಂಕ ಅನುಭವಿಸಿದರು.…

2 days ago