
ಗಡಿಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಗುಂಪುಗಳ ಹಾವಳಿ ಹೆಚ್ಚುತ್ತಿದ್ದು, ಸರಕಾರಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆಯ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ವಿವಾದ ಚಿಗುರುತ್ತಿದೆ. ಈಗ ಮರಾಠಿ ಪುಂಡರು ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.
ಕನ್ನಡ ಮಾತನಾಡಲು ನಿರಾಕರಣೆ – ಪಿಡಿಓಗೆ ಅವಾಚ್ಯ ನಿಂದನೆ
ಕಿಣೆಯ ಗ್ರಾಮ ಪಂಚಾಯತ್ ಪಿಡಿಓ ನಾಗೇಂದ್ರ ಪತ್ತಾರರಿಗೆ, ಕನ್ನಡ ಮಾತನಾಡದಂತೆ ಒತ್ತಾಯಿಸಿ, ಮರಾಠಿ ಭಾಷೆಯಲ್ಲಿ ಮಾತು ಆಡಲು ಒತ್ತಡ ಹೇರಲಾಗಿದೆ. ಈ ವೇಳೆ ತಿಪ್ಪಣ್ಣ ಸುಭಾಷ ಡೊಕ್ರೆ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ಆತಂಕದಲ್ಲಿ ಅಧಿಕಾರಿ ವರ್ಗ – ಭದ್ರತಾ ಬೇಡಿಕೆ
ಮರಾಠಿ ಭಾಷಿಕ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ವರ್ಗ ದೈನಂದಿನ ಭಯದ ವಾತಾವರಣದಲ್ಲೇ ಕರ್ತವ್ಯ ನಿರ್ವಹಿಸುತ್ತಿದೆ. ಈ ಘಟನೆಯ ಬೆನ್ನಲ್ಲೇ ಕಿಣೆಯ ಗ್ರಾಮ ಪಂಚಾಯತ್ ಪಿಡಿಓ ಪೊಲೀಸರ ಭದ್ರತೆ ಒದಗಿಸಲು ಆಗ್ರಹಿಸಿದ್ದಾರೆ.
ಈ ಕೃತ್ಯ ಪ್ರಶ್ನೆಗಳ ಸುಳಿಯಲ್ಲಿ ಸಿಕ್ಕಿದ್ದು, ಕನ್ನಡಿಗರಿಗೆ ವಿರುದ್ಧವಾಗಿ ನಡೆಯುತ್ತಿರುವ ಈ ರೀತಿಯ ಕೃತ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.