Categories: Latest

ಕುಡುಕನ ನಾಟಕದಿಂದ ಶೃಂಗೇರಿ ಪೊಲೀಸರ ಪರದಾಟ!

ಶೃಂಗೇರಿಯಲ್ಲಿ ಕುಡಿದ ಮತ್ತಿನಲ್ಲಿ ಒಬ್ಬ ವ್ಯಕ್ತಿ ಪೊಲೀಸರನ್ನೂ, ಆಂಬುಲೆನ್ಸ್ ಸಿಬ್ಬಂದಿಯನ್ನೂ ಕಂಗಾಲು ಗೊಳಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಗುಂಪು ಘರ್ಷಣೆಯ ಸುಳ್ಳು ಕರೆ ನೀಡಿ ರಾತ್ರಿಯಿಡೀ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡವನ್ನು ಹರಿಯಾಡಿಸಿದ ಈ ವ್ಯಕ್ತಿ ಕೊನೆಗೆ ಪೊಲೀಸರ ಬುದ್ಧಿವಾದಕ್ಕೆ ಗುರಿಯಾಗಿದ್ದಾನೆ.

ಸುಳ್ಳು ಕರೆಗಳಿಂದ ಪೊಲೀಸರು ಪರದಾಟ

ಹಗರಿಬೊಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕಾಗಿ ಶೃಂಗೇರಿಗೆ ಬಂದಿದ್ದ ಬಸವರಾಜ್ ಎಂಬ ಮದ್ಯವ್ಯಸನಿ, ರಾತ್ರಿಯಲ್ಲಿ ಪೊಲೀಸರಿಗೆ ಕರೆ ಮಾಡಿ, “ಶೃಂಗೇರಿ ಬಸ್ ನಿಲ್ದಾಣದಲ್ಲಿ ಭಾರೀ ಗುಂಪು ಘರ್ಷಣೆ ನಡೆದಿದೆ” ಎಂದು ತುರ್ತು ಮಾಹಿತಿ ನೀಡಿದ. ಇದನ್ನೇ ನಂಬಿದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದರು.

ಇದೇ ಸಮಯದಲ್ಲಿ ಆಂಬುಲೆನ್ಸ್ ಸಿಬ್ಬಂದಿಗೂ ಬಸವರಾಜ್ ಕರೆ ಮಾಡಿ, “ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ, ತಕ್ಷಣವೇ ಬಂದು ಆಸ್ಪತ್ರೆಗೆ ಕರೆದೊಯ್ಯಿ” ಎಂದು ಸುಳ್ಳು ಮಾಹಿತಿ ನೀಡಿದ. ಇದರ ಪರಿಣಾಮವಾಗಿ ಆಂಬುಲೆನ್ಸ್ ಸಿಬ್ಬಂದಿಯೂ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಆದರೆ ಅಲ್ಲಿದ್ದದ್ದು ಬಿಕೋ ಎದೆಯಾದ ಬಸ್ ನಿಲ್ದಾಣ ಮಾತ್ರ!

“ನನ್ನನ್ನು ಹುಡುಕಿ!” – ಕುಡುಕನ ಸವಾಲ್

ಘಟನೆ ಬಗ್ಗೆ ಪೊಲೀಸರು ಮತ್ತೆ ಮತ್ತೆ ಬಸವರಾಜ್‌ಗೆ ಕರೆ ಮಾಡಿದರು. ಅದಕ್ಕೆ ಪ್ರತಿಯಾಗಿ ಕುಡುಕನು “ಭೂಮಿ ಮೇಲೆ, ಆಕಾಶದ ಕೆಳಗಿದ್ದೇನೆ! ಹಿಮ್ಮತ್ತಿದ್ದರೆ ನನ್ನನ್ನು ಹುಡುಕಿ!” ಎಂದು ತಿರುಗೇಟು ನೀಡಿದ. ಈ ಮಾತು ಕೇಳಿ ಪೊಲೀಸರ ಕೋಪ ಹೆಚ್ಚಾಗಿತ್ತು.

ಕೊನೆಗೂ ಕುಡುಕ ಪತ್ತೆ!

ಬಹುಶ್ರಮಪಟ್ಟು ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ಕುಡುಕ ಬಸವರಾಜ್‌ನನ್ನು ಪತ್ತೆಹಚ್ಚಿ, ಅವನಿಗೆ ಬುದ್ಧಿವಾದ ಹೇಳಿ ಬಿಡುಗಡೆ ಮಾಡಿದರು. ಆದರೆ ಈ ಅವಾಂತರದಿಂದ ಶೃಂಗೇರಿ ಪೊಲೀಸರಿಗೆ ಹಾಗೂ ಆಂಬುಲೆನ್ಸ್ ಸಿಬ್ಬಂದಿಗೆ ರಾತ್ರಿಯಿಡೀ ಪರದಾಟ ನಿಜವಾಗಿಯೂ ದೊಡ್ಡ ತಲೆನೋವಾಯಿತು!

nazeer ahamad

Recent Posts

ಹಾಸನದಲ್ಲಿ ದುರಂತ: ಹೇಮಾವತಿ ನದಿ ಮತ್ತು ಕೆರೆಯಲ್ಲಿ ಮುಳುಗಿ ನಾಲ್ವರು ಸಾವು.

ಹಾಸನ: ಹಾಸನ ಜಿಲ್ಲೆಯ ಎರಡು ವಿಭಿನ್ನ ಘಟನೆಯಲ್ಲಿ ನಾಲ್ವರು ದುರ್ಘಟನಾವಶಾತ್ ನೀರುಪಾಲಾಗಿದ್ದಾರೆ. ಒಂದು ಘಟನೆ ಸಕಲೇಶಪುರ ತಾಲ್ಲೂಕಿನ ಹೆನ್ಲಿ ಈ…

4 hours ago

ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆ.

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ 21 ವರ್ಷದ ಬಿಸಿಎ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶುಕ್ರವಾರ…

4 hours ago

ಹಾಸನದಲ್ಲಿ ಕುಟುಂಬ ಕಲಹ: ಲಾಂಗ್ ಹಿಡಿದು ಓಡಾಡಿದ ಮಹಿಳೆ!

ಹಾಸನದಲ್ಲಿ ಕುಟುಂಬ ಕಲಹ ತೀವ್ರಗೊಂಡ ಪರಿಣಾಮ, ಅಸಾಧಾರಣ ಘಟನೆ ಬೆಳಕಿಗೆ ಬಂದಿದೆ. ಹೊಸ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕೈಯಲ್ಲಿ ಲಾಂಗ್…

6 hours ago

ನಡು ಬೀದಿಯಲ್ಲಿ ಅಂಕಲ್ನ ಅಸಭ್ಯ ವರ್ತನೆಯ ವಿಡಿಯೋ ವೈರಲ್.

ಸೋಶಿಯಲ್ ಮೀಡಿಯಾದ ಪ್ರಭಾವ ಹೆಚ್ಚಾಗುತ್ತಿದ್ದಂತೆ ಹಲವಾರು ವಿಚಿತ್ರ ಘಟನೆಗಳ ವಿಡಿಯೋಗಳು ವೈರಲ್ ಆಗುತ್ತವೆ. ಇತ್ತೀಚೆಗೆ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ…

6 hours ago

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಜೇನು ಕೃಷಿ ಪದ್ಧತಿ ತರಬೇತಿ

ಮುಂಡಗೋಡ: ತಾಲ್ಲೂಕಿನ ರೈತರು ತಮ್ಮ ಕೃಷಿ ಬೇಸಾಯದೊಂದಿಗೆ ಜೇನು ಕೃಷಿ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ರಾಷ್ಟ್ರೀಯ ಜೇನುಮಂಡಳಿ ನವದೆಹಲಿ, ಜಿಲ್ಲಾ…

6 hours ago

ಕಳಚೆ ಭೂಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಳಚೆ ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ…

6 hours ago