ಕರ್ನಾಟಕ ರಾಜ್ಯದಲ್ಲಿ ರಾಜ್ಯ ಪೋಲಿಸ್ ಇಲಾಖೆಯ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಮಾನ್ಯ ಶ್ರೀ ಎನ್ ವಿಷ್ಣುವರ್ಧನ ಐಪಿಸ್ ಅಧಿಕಾರ ವಹಿಸಿ ಕೊಂಡ ನಂತರ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಇತಿಹಾಸದ ಪುಟವಾಗುವಂತೆ ಹಾಗೆ ಮೊಟ್ಟ ಮೊದಲ ಬಾರಿಗೆ ಸಿಬ್ಬಂದಿ ಸ್ಪಂದನೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಕೊಂಡು ಉತ್ತರಕನ್ನಡ ಜಿಲ್ಲೆಯ ಸುಮಾರು ಏಳು ಪೋಲಿಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಅವರ ಜೊತೆ ಸಮಗ್ರವಾಗಿ ಚರ್ಚಿಸಿ ಕುಂದು ಕೊರತೆ ಹಾಗೂ ಬೇಡಿಕೆಗಳನ್ನು ಸಮ ಕ್ಷಮವಾಗಿ ಚರ್ಚಿಸಿ ಆದಷ್ಟು ಬೇಗ ನಿಯಮನು ಸಾರವಾಗಿ ಯಾವುದೇ ವಿಳಂಬವಿಲ್ಲದೆ ಪರಿಹರಿಸಿ ಕೊಡುವುದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರು ಹಾಗೂ ಉತ್ತರಕನ್ನಡ ಜಿಲ್ಲೆಯ ಶಿರಸಿ ಉಪ ವಿಭಾಗದ ಸುಮಾರು ಏಳು ಪೋಲಿಸ್ ಠಾಣೆಗಳ ಏಳು ಪೊಲೀಸ್ ಸಿಬ್ಬಂದಿಗಳಾದ,,
(1) ಪ್ರವೀಣ .ಎನ್. ಶಿರಸಿ ನಗರ ಠಾಣೆ
(2) ಗಣಪತಿ ಭಂಟ ಶಿರಸಿ ಹೊಸ ಮಾರುಕಟ್ಟೆ ಠಾಣೆ
(3) ಮಹಾದೇವ ನಾಯ್ಕ ಶಿರಸಿ ಗ್ರಾಮೀಣ ಠಾಣೆ
(4) ಅಣ್ಣಪ್ಪ ಬುಡಿಗೇರ ಮುಂಡಗೋಡ ಠಾಣೆ
(5) ಬಸವರಾಜ ಹಗರಿ ಯಲ್ಲಾಪುರ ಠಾಣೆ
(6) ಮಂಜುನಾಥ ನಡುವಿನಮನಿ ಬನವಾಸಿ ಠಾಣೆ
(7) ಮೊಹಮದ್ ಗೌಸ್ ಅಹಮದ್ ಸಾಬ ಸಿದ್ದಾಪುರ ಪೊಲೀಸ್ ಠಾಣೆ ಇವರುಗಳಿಗೆ 2022ಆಕೊಬರ್ ತಿಂಗಳ ಅತ್ಯುತ್ತಮ ಸಾಧಕ ಎಂಬ ಪ್ರಮಾಣ ಪತ್ರ ನೀಡಿ ಅವರಿಗೆ ಅಭಿನಂದೆಯನ್ನು ಸಲ್ಲಿಸಿದರು ಈ ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತ ಅಧಿಕಾರಿ ಹಾಗೂ ಸಿರ್ಸಿ ಡಿ ಎಸ್ ಪಿ ರವಿ ಡಿ ನಯ್ಕಾರವರು ಮತ್ತು ಕುಮಾರಿ ಸಂಗೀತ ಕಾನಡೆ ಸಿದ್ದಾಪುರ ಪೊಲೀಸ್ ಠಾಣೆರವರು ಕಾರ್ಯಕ್ರಮದಲ್ಲಿ ಪ್ರಾಥನೆ ಸಲ್ಲಿಸಿ .ಅಷ್ಟೇ ಅಲ್ಲದೆ ಸಿರ್ಸಿ ವೃತ್ತ ನಿರೀಕ್ಷಕರಾದ ಸನ್ಮಾನ್ಯ ಶ್ರೀ ರಾಮಚಂದ್ರ ನಾಯಕ ರವರು ಪ್ರಸ್ತಾವಿಕ ಭಾಷಣ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಿರ್ಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಾದ ಶ್ರೀ ಭೀಮಾಶಂಕರ ರವರು ನಿರೂಪಣೆ ಮಾಡಿದರು. ಅಲ್ಲದೆ ಸಿರ್ಸಿ ಗ್ರಾಮೀಣ ಪೊಲೀಸ್ ಠಾಣೆಯ ಶ್ರೀ ಇರಯ್ಯರವರು ಉಪಸ್ಥಿತರಿದ್ದರು ಹಾಗು ಯಲ್ಲಾಪುರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸುರೇಶ್ ಯಲ್ಲೂರ್, ಮುಂಡಗೋಡ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಿದ್ದು ಸಿಮಾನಿ, ಸಿದ್ದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರುಗಳಾದ ಮಹಾಂತೇಶ್, ಮಲ್ಲಿಕಾರ್ಜುನ್, ಹನುಮಂತ ಬಿರಾದಾರ್, ರಾಜಕುಮಾರ್ ಮಹಿಳಾ ಪಿಎಸ್ಐ ರವರುಗಳಾದ ಮಾಲಿನಿ ಹೌಸ ಬಾವಿ,ರತ್ನ ಕುರಿ, ನಸ್ರಿನ್ ಮೊದಲಾದವರು ಹಾಜರಿದ್ದರು…
ವರದಿ: ಶ್ರೀಪಾದ್ ಎಸ್ ಎಚ್.