ಒಡಿಶಾದ ನಯಾಗಢ ಜಿಲ್ಲೆಯ ದಾಸ್ಪಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪಥರಾಪುಂಜ ಗ್ರಾಮದ ನಿವಾಸಿ ಬಿಜಯ್ ಪ್ರಧಾನ್ 35 ವರ್ಷ ವಯಸ್ಸಾಗಿತ್ತು. ಆದರೆ, ಅಂಗವೈಕಲ್ಯ ಕಾಡುತ್ತಿತ್ತು. ಇತ್ತೀಚೆಗೆ ಬಿಜೆಯ್ ತನ್ನ ಕುಟುಂಬದ ಮುಂದೆ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದ. ಕುಟುಂಬ ಎಲ್ಲ ಸದಸ್ಯರು ಒಪ್ಪಿದ್ದರು. ಮದುವೆ ಮಾಡಿ ಆತನ ಜೀವನವನ್ನು ಭದ್ರ ಪಡಿಸಲು ಮುಂದಾಗಿದ್ದರು. ಆದರೆ, ಮಲತಾಯಿಗೆ ಇದು ಇಷ್ಟವಿರಲಿಲ್ಲ. ಒಂದು ವೇಳೆ ಮದುವೆಯಾದರೆ ಎಲ್ಲ ಆಸ್ತಿ ಆತನ ಪಾಲಾಗಬಹುದು ಎಂದು ಮದುವೆ ಮುರಿಯಲು ಪ್ರಯತ್ನಿಸುತ್ತಿದ್ದಳು.
ಆದರೆ, ಬಿಜಯ್ ಮದುವೆ ಆಗಿ ಹೊಸ ಜೀವನ ಆರಂಭಿಸುವ ಉತ್ಸುಕದಲ್ಲಿದ್ದನು. ಆದರೆ, ಆತನಿಗೆ ಚೆನ್ನಾಗಿ ಥಳಿಸಿ, ಅನೇಕ ತಿಂಗಳವರೆಗೆ ಆಹಾರವನ್ನು ನೀಡದೆ ಮಲತಾಯಿ ಹಿಂಸೆ ನೀಡಿದ್ದಳು. ಆದಾಗ್ಯೂ ಶನಿವಾರ ರಾತ್ರಿ ಮದುವೆ ವಿಚಾರವಾಗಿ ಮತ್ತೊಮ್ಮೆ ಜಗಳ ನಡೆಯಿತು. ಈ ವೇಳೆ ಬಿಜಯ್ಗೆ ಮಲತಾಯಿ ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಬಿಜಯ್ ಮೃತಪಟ್ಟಿದ್ದಾನೆ. ಬಿಜಯ್ ತಂದೆ ಮತ್ತು ಮಲತಾಯಿಯ ಇಬ್ಬರು ಸ್ವಂತ ಮಕ್ಕಳು ಆಕೆಗೆ ಸಹಾಯ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮಲಮಗನಾದ್ದರಿಂದ ಮದುವೆಯ ನಂತರ ಆಸ್ತಿಯನ್ನೆಲ್ಲ ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದರು. ಹೀಗಾಗಿ ಬಿಜಯ್ ಮದುವೆಯಾಗುವುದು ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಆತನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಆದರೆ, ಮಲತಾಯಿ ಆರೋಪವನ್ನು ಅಲ್ಲಗಳೆದಿದ್ದು, ಸಂಬಂಧಿಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…