ಪೊಲೀಸರ ಕುಮ್ಮಕ್ಕಿನಿಂದ ಗೂಂಡಾಗಳು ಹಲ್ಲೆ ನಡೆಸಿರುವುದಾಗಿ ಹೊಳೆನರಸೀಪುರದಲ್ಲಿ ಕೆಆರ್ಎಸ್ ಪಕ್ಷದ ಮುಖಂಡರು ಹೋರಾಟ ನಡೆಸಿದ್ದು ಅವರುಗಳನ್ನು ಪೊಲೀಸರ ವ್ಯಾನ್ ನಲ್ಲಿ ಕೊಂಡೊಯ್ಯುವಾಗ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಈ ಸಂದರ್ಭದಲ್ಲಿ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಇನ್ನೂ ಕೆಲವರಿಗೆ ಕಲ್ಲಿನಿಂದ ಬಲವಾದ ಹೊಡೆತ ಬಿದ್ದ ಕಾರಣ ತಲೆಯಿಂದ ತೀವ್ರ ರಕ್ತ ಸ್ರಾವ ವಾಗಿರುತ್ತದೆ.
ನ್ಯಾಯ ಕೇಳಲು ಬಂದವರಿಗೆ ಕಲ್ಲಲ್ಲಿ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ? ಪೊಲೀಸರು ಎಷ್ಟೇ ಗೂಂಡಾಗಳಿಗೆ ಕುಮ್ಮಕ್ಕು ನೀಡಿ ಹಲ್ಲೆ ನಡೆಸಲು ಯತ್ನಿಸಿದರು ನ್ಯಾಯದ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಕೆಆರ್ ಎಸ್ ಪಕ್ಷದ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.