ಮುಂಡಗೋಡ: ದಿನಾಂಕ 16 ರಂದು ಯಲ್ಲಾಪುರದಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮುಂಡಗೋಡ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಸುಳ್ಳಳ್ಳಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಬಾಲಕರ ವಿಭಾಗದಲ್ಲಿ ವಿನಾಯಕ ಬಸವಣ್ಣಿ ಪಾಟೀಲ (6ನೇ ತರಗತಿ),ಬಾಲಕಿಯರ ವಿಭಾಗದಲ್ಲಿ ಸುನಿತಾ ವಿಠ್ಠು ಯಮಕರ(7ನೇ ತರಗತಿ).
ಶಾಲಾ ಮಕ್ಕಳಿಗೆ ಪಾಠದೊಂದಿಗೆ ವಿವಿಧ ಆಟಗಳನ್ನು ಶಾಲೆಯಲ್ಲಿರುವ ಮುಖ್ಯ ಶಿಕ್ಷಕರಾದ ಶ್ರೀ ನಾರಾಯಣ ಗೊಟಗೋಡಿ,ಸಹ ಶಿಕ್ಷಕರಾದ ಶ್ರೀ ನಾಗರಾಜ ಆರ್.ಕೆ,ಅತಿಥಿ ಶಿಕ್ಷಕರಾದ ಶ್ರೀ ಶಿವಪ್ಪ ಚಿಟಗೇರಿ ಇವರುಗಳು ವಿದ್ಯಾರ್ಥಿಗಳಿಗೆ ಆಟದ ಸಂಪೂರ್ಣ ತರಬೇತಿಯನ್ನು ನೀಡುತ್ತಿದ್ದಾರೆ.
ವಿಜೇತ ಆಟಗಾರರಿಗೆ ಹಾಗೂ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಸುಳ್ಳಳ್ಳಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮದ ಎಲ್ಲಾ ನಾಗರಿಕರು, ತಾಲೂಕಿನ ಎಲ್ಲಾ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷರು ಅಭಿನಂದಿಸಿದ್ದಾರೆ.
ವರದಿ:ಮಂಜುನಾಥ ಎಫ್ ಎಚ್.