ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಕಾಲೇಜ್ ಒಂದರ ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿ ಲಾಂಗ್ ಹಿಡಿದು ಹುಚ್ಚಾಟ ಮೆರೆದಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ವಿಡಿಯೋದಲ್ಲಿ ಕಾಣುವಂತೆ ಮೂವರು ವಿದ್ಯಾರ್ಥಿಗಳು ರೈಲಿನ ಕಿಟಕಿ ಬಾಗಿಲಿನಲ್ಲಿ ನಿಂತಿದ್ದು, ಅವರ ಕೈಗಳಲ್ಲಿ ಲಾಂಗ್ ಇದೆ. ಮಧ್ಯೆ ಮಧ್ಯೆ ಘೋಷಣೆಗಳನ್ನು ಕೂಗುತ್ತಾ ಅವರು ಸಾಗಿದ್ದು, ಓರ್ವ ನಂತೂ ಲಾಂಗ್ ನಿಂದ ರೈಲಿನ ಕಂಪಾರ್ಟ್ಮೆಂಟಿಗೆ ಹೊಡೆದಿದ್ದಾನೆ.
ಮುಂದಿನ ಬಾಗಿಲಿನಲ್ಲಿ ನಿಂತವನೊಬ್ಬ ತನ್ನ ಮೊಬೈಲ್ ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಬಳಿಕ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳಾದ ಅನ್ಬರಸು, ರವಿಚಂದ್ರನ್ ಹಾಗೂ ಅರುಳ್ ಎಂಬ ಮೂವರನ್ನು ಬಂಧಿಸಿದ್ದಾರೆ.
We would like to inform you that the 3 youths seen in this viral video performing stunts with sharp weapons in their hand, have been arrested by @grpchennai! They are Anbarasu and Ravichandran from Gummidipoondi and Arul from Ponneri. They are all students of Presidency College. pic.twitter.com/3FQVpTWeoW
— DRM Chennai (@DrmChennai) October 11, 2022