ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಯಲು ಇಲಾಖೆಯು ಜುಲೈ 2024ರಿಂದ ನಿರಂತರ ಜಾರಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದು, ಈ ಅವಧಿಯಲ್ಲಿ ಒಟ್ಟು 31 ಘೋರ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟಾರೆ ₹9.31 ಕೋಟಿ ಮೌಲ್ಯದ ಅಕ್ರಮ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ವಸ್ತುಗಳು:
115.350 ಲೀ. ಗೋವಾ ಮದ್ಯ
47.250 ಲೀ. ಡಿಫೆನ್ಸ್ ಮದ್ಯ
140.940 ಲೀ. ಅಕ್ರಮ ಮದ್ಯ
56.570 ಲೀ. ಬಿಯರ್
244.920 ಲೀ. ವೈನ್
115 ಲೀ. ಶೇಂದಿ
92 ಲೀ. ಬೆಲ್ಲದ ಕೊಳೆ
64.750 ಲೀ. ಕಳ್ಳಬಟ್ಟಿ
4 ವಾಹನಗಳು
ಒಟ್ಟು 876.780 ಲೀ. ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳು:
ಅಬಕಾರಿ ಇಲಾಖೆಯು ಅಕ್ರಮ ಮದ್ಯ ಸರಬರಾಜನ್ನು ತಡೆಯಲು ಸಮರ್ಥ ಕ್ರಮಗಳನ್ನು ತೆಗೆದುಕೊಂಡಿದೆ. ಮದುವೆ, ಸಭೆ, ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ನೀಡುವ ಸಾಂದರ್ಭಿಕ CL-5 ಪರವಾನಗಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. 2023-24ನೇ ಸಾಲಿನಲ್ಲಿ ಏಪ್ರಿಲ್‌ ರಿಂದ 2024ರ ಜನವರಿ 15ರ ವರೆಗೆ 432 CL-5 ಪರವಾನಗಿಗಳನ್ನು ನೀಡಲಾಗಿದ್ದು, ಏಪ್ರಿಲ್ 2024ರಿಂದ 2025ರ ಜನವರಿ 15ರ ವರೆಗೆ 865 ಪರವಾನಗಿಗಳನ್ನು ಮಂಜೂರು ಮಾಡಲಾಗಿದೆ.
ಸಮಾಜಕ್ಕೆ ತೊಂದರೆ ಇಲ್ಲದಂತೆ ಜಾರಿಗೆ ಕ್ರಮ:
ಸಮಾಜದ ಶಾಂತಿ ಕದಡುವಂತಿಲ್ಲದೆ ಅಧಿಕಾರಿಗಳು ಸಮವಸ್ತ್ರ ಧರಿಸದೇ ಸಭೆ, ಸಮಾರಂಭಗಳಿಗೆ ಭೇಟಿ ನೀಡಿ, ಅನಧಿಕೃತ ಮದ್ಯ ಸರಬರಾಜನ್ನು ತಡೆಯುತ್ತಿದ್ದಾರೆ. ಗೋವಾ ಮತ್ತು ಡಿಫೆನ್ಸ್ ಮದ್ಯದ ಅಕ್ರಮ ಪೂರೈಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಅಬಕಾರಿ ಇಲಾಖೆಯ ಈ ನಿಗಾ ಕ್ರಮಗಳಿಂದ ಅಕ್ರಮ ಮದ್ಯ ವ್ಯಾಪಾರ ತೀವ್ರವಾಗಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಸಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!