ಕುಂದಗೋಳ; ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ ನೀರು ಸರಬರಾಜು ಮಾಡುವ ಟ್ಯಾಂಕರ್ ಶಿಥಲಾವ್ಯವಸ್ಥೆ ತಲುಪಿದರು ದುರಸ್ಥಿ ಭಾಗ್ಯ ಕಂಡಿಲ್ಲ..

ರೊಟ್ಟಿಗವಾಡ ಗ್ರಾಮ ಪಂಚಾಯತಿಯ ಹತ್ತಿರ ಇರುವು ನೀರು ಸರಬರಾಜು ಮಾಡುವು ಟ್ಯಾಂಕರ್ ನಿರ್ಮಿಸಿದ್ದು, ದುರಸ್ಥಿ ಭಾಗ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಜಾನ ಮೌನ ವಹಿಸಿದ್ದಾರೆ.

ಯರಗುಪ್ಪಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ನೀರು ಸರಬರಾಜು ಮಾಡುವು ಟ್ಯಾಂಕರ್ ಇದೆ, ಇದರ ಪಕ್ಕದಲ್ಲಿ ಶುದ್ದ ನೀರಿನ ಘಟಕ ಇದ್ದು, ಗ್ರಾಮದ ಸಾರ್ವಜನಿಕರು ದಿನನಿತ್ಯ ಶುದ್ದ ನೀರು ತೆಗದಕೂಳ್ಳಲು ಬರುತ್ತಾರೆ. ಈ ಟ್ಯಾಂಕರ್ ಕಾಂಕ್ರೀಟ್ ಉದುರಿ ಕಬ್ಬಿಣದ ಬಾರ್ ಗಳು ಎದ್ದು ಬಿಳ್ಳುವು ಹಂತಕ್ಕೆ ತಲುಪಿದನ್ನ ನೋಡಿ ಇಲ್ಲಿನ ಜನ ಭಯಬೀತರಾಗಿದ್ದಾರೆ.

ಇನ್ನೂ ಈ ಗ್ರಾಮದಲ್ಲಿ 3000 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಒಂದೇ ಟ್ಯಾಂಕರ್ ಇದ್ದು ನಿರ್ಮಾಣ ಕಾರ್ಯಕ್ಕೆ ಒಳ ಪಡಿಸಿದರೆ ಬೇರೆ ವ್ಯವಸ್ಥೆ ಇಲ್ಲದಂತೆ ಆಗುತ್ತದೆ. ನೂತನವಾಗಿ ನಿರ್ಮಿಸಬೇಕು ಎಂದು ಇಲ್ಲಿ ಜನರ ಆಗ್ರಹ ವಾಗಿದೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಈಗಾಗಲೇ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಹೊಸದಾಗಿ ಟ್ಯಾಂಕರ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದವೆ. ಸ್ಥಳ ಪರಿಶೀಲನೆ ಮಾಡಿದ್ದಾರೆ. ಇನ್ನೇನು ನಿರ್ಮಾಣಗೊಳ್ಳವು ಹಂತಕ್ಕೆ ತಲುಪಬೇಕು ಎಂದು ಪ್ರತಿಕ್ರೀಯಸಿದರು.

ಈ ಬಗ್ಗೆ ದೂರವಾಣಿ ಮುಖಾಂತರ ಮಾತನಾಡಿದ ನಾವು ಎಲ್ ಆ್ಯಂಡ್ ಟಿ ಮತ್ತು ಜೆಜೆಎಮ್ ಎರಡು ಪ್ರಾಧಿಕಾರ ಇಲಾಖೆಯಿಂದ ಪ್ರಸ್ತಾವನೆ ಸಲ್ಲಸಿದವೆ, ಸದ್ಯ ಎಲ್ ಆ್ಯಂಡ್ ಟಿ ಯಿಂದ ಅನುಮೋದನೆ ಕೂಡ ದೊರಕಿದೆ. ಭೂಮಿ ಪೂಜೆ ಮುಗಿದ ತಕ್ಷಣವೇ ಕಾಮಗಾರಿ ಪ್ರಾರಂಭಗೊಳ್ಳುತೆ ಎಂದು ಮಾಹಿತಿ ನೀಡಿದರು ಗ್ರಾಮೀಣ ನೈರ್ಮಲ್ಯ ಇಲಾಖೆ ಅಧಿಕಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆಕಾಶ ವಂದೇ,

ವರದಿ; ಶಾನು ಯಲಿಗಾರ

error: Content is protected !!