ಹಾಸನ: ಹಾಸನ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂರಜ್ ರೇವಣ್ಣ ಮಾತನಾಡುವ ವೇಳೆ, “ಇಲ್ಲಿ ಎರಡು ಪಕ್ಷಗಳಿವೆ, ಒಂದೇ ದೇವೇಗೌಡರ ಪರ ಮತ್ತು ಮತ್ತೊಂದೇ ಅವರ ವಿರುದ್ಧ. ನಾನು ಇಲ್ಲಿಗೆ ಬಂದಾಗ ‘ನಾಯಿಕಣ್ಣು, ನರಿ ಕಣ್ಣು, ಕೆಟ್ಟ ಮು… ಕಣ್ಣು’ ಅಂತಾ ಅಂತಾ ದೃಷ್ಟಿ ತೆಗೆದರು. ನಾನು ಅಷ್ಟೇ ಹಿಂಜರಿದು, ‘ಕೆಟ್ಟ ಸೂ… ಕಣ್ಣು’ ಎಂದೂ ಹೇಳಿದಿರಬಹುದೆಂದು ಯೋಚಿಸಿದ್ದೇನೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
“ನಾನು ಯಾವ ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ನಾನು ಪಕ್ಷದೊಳಗಿನ ಮೋಸ ಮಾಡಿದವರ ವಿರುದ್ಧ ಈ ಶಬ್ದಗಳನ್ನು ಬಳಸುತ್ತಿದ್ದೇನೆ. ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ” ಎಂದು ಅವರು ಹೇಳಿದ್ದಾರೆ.
ಪೆನ್ ಡ್ರೈವ್​ ಹಂಚಿ ನಾನು ಎಂಎಲ್​ ಸಿ ಆಗಿಲ್ಲ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಇಲಾಖೆಯಲ್ಲಿ ತೊಂದರೆಯಾದರೆ ನನ್ನ ಗಮನಕ್ಕೆ ತನ್ನಿ, ಯಾರು ಬರುತ್ತಾರೋ, ಬಿಡ್ತಾರೋ ಆದರೆ ನಾನು ಮಾತ್ರ ಬರುತ್ತೇನೆ.”ನಾನು ಯಾವ ಜಾತಿ, ಧರ್ಮವನ್ನು ನೋಡದೆ, ಎಲ್ಲರಿಗಾಗಿ ಕೆಲಸ ಮಾಡುತ್ತೇನೆ. ನಮ್ಮ ತಾತ ದೇವೇಗೌಡರು ಸದಾ ಜಾತಿ ಅಥವಾ ಧರ್ಮ ನೋಡದೆ ಸೇವೆ ಮಾಡಲು ಹೇಳಿದ್ದರು” ಎಂದು ಅವರು ತಮ್ಮ ಹೇಳಿಕೆಯನ್ನು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!