ಮೊಳಕಾಲ್ಮೂರು: ಅಧಿಕಾರ ದುರುಪಯೋಗ ಹಾಗು ಇಲಾಖೆಯ ಹಣ ದುರ್ಬಳಕೆ ಆರೋಪದ ಮೇಲೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ದಾವಣಗೆರೆ ಜಿಲ್ಲೆಯ ದೇವರಾಜು ಅರಸು ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕ ಅಧಿಕಾರಿಯಾಗಿದ್ದ ಎನ್.ಆರ್ ಶೇಖರ್ ರವರನ್ನು ತಕ್ಷಣದಿಂದ ಜಾರಿಗೆಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಶೇಖರ್ ರವರು ಸೇವೆಯಲ್ಲಿದ್ದ ಅವಧಿಯಲ್ಲಿ 2020-21ನೇ ಆರ್ಥಿಕ ಸಾಲಿನಲ್ಲಿ 47,45,964.ರೂ ಹಾಗು 2021-22ನೇ ಆರ್ಥಿಕ ಸಾಲಿನಲ್ಲಿ 16,94,212ರೂ ಅನುದಾನವನ್ನು ವಿದ್ಯಾರ್ಥಿನಿಲಯಗಳ ಮೂಲಭೂತ ಸೌಕರ್ಯ ಲೆಕ್ಕಾಶೀರ್ಷಿಕೆಯಲ್ಲಿ ಖರ್ಚು ಮಾಡಿದ್ದು ಸರ್ಕಾರಕ್ಕೆ ಅನುದಾನ ವೆಚ್ಚದ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸದಿರುವ ಕಾರಣ ಕರ್ತವ್ಯ ಲೋಪ ಎಸಗಿ ಇಲಾಖೆ ಹಣ ದುರ್ಬಳಕೆ ಮಾಡಿದ ಆರೋಪದ ಮೇಲೆ ಸೇವೆಯಿಂದ ವಜಾಗೊಳಿಸಲಾಗಿದೆ.