ಜನಸಾಮಾನ್ಯರ ಮೇಲೆ ದರ್ಪ ತೋರಿಸೋಕೆ ಹೋದ್ರೆ ಏನಾಗುತ್ತೇ ಅನ್ನೋಕೆ ಈ ಘಟನೆಯೇ ಸಾಕ್ಷಿ. ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಜೊತೆ ಮಾತಿನ ಚಕಮಕಿ ನಡೆಸ್ತಿರೋ ಮಹಿಳೆ. ಮಾತಿಗೆ ಮಾತು ಬೆಳೆದು ಟಿಸಿ ಮುಂದೆ ಕಣ್ಣೀರು. ಮಹಿಳೆಯ ಕಣ್ಣೀರ ಕಥೆ ಕಂಡು ಟಿಕೆಟ್ ಕಲೆಕ್ಟರ್ ಅನ್ನ ತರಾಟೆಗೆ ತೆಗೆದುಕೊಂಡ ಸಹ ಪ್ರಯಾಣಿಕರು. ಇಂತದೊಂದು ದೃಶ್ಯ ಕಂಡು ಬಂದಿರೋದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ.
ಕೆ.ಆರ್ ಪುರಂನ ರೈಲ್ವೇ ನಿಲ್ದಾಣದಿಂದ ಲಖನೌಗೆ ಪ್ರಯಾಣ ಬೆಳೆಸಲು ಮಹಿಳೆಯೊಬ್ಬರು ತಮ್ಮ ಲಗೇಜ್ ಸಮೇತರಾಗಿ ಆಗಮಿಸಿದ್ರು. ಈ ವೇಳೆ ಮಹಿಳೆಯನ್ನ ಕಂಡ ಟಿಕೆಟ್ ಕಲೆಕ್ಟರ್ ಒರ್ವ ಟಿಕೆಟ್ ತೋರಿಸುವಂತೆ ಸೂಚಿಸಿದ್ನಂತೆ. ಈ ವೇಳೆ ಟಿಕೆಟ್ ತೋರಿಸಿದ ಮಹಿಳೆಗೆ ಟಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾಳೆ. ಟ್ರೈನ್ ಏರುವ ಮುನ್ನವೇ ಟಿಸಿ ನನ್ನ ಬಳಿ ಟಿಕೆಟ್ ಕೇಳಿದ್ದು ಎಷ್ಟು ಸರಿ ಅಂತ ಸಹ ಮಹಿಳೆ ಅಸಮಾಧಾನ ಹೊರಹಾಕಿದ್ದಾಳೆ. ಅಲ್ಲದೇ ಮಹಿಳೆಯನ್ನ ಚುಡಾಯಿಸುವ ದೃಷ್ಠಿಯಿಂದ ಟಿಕೆಟ್ ಕಲೆಕ್ಟರ್ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಮಹಿಳೆ ಆರೋಪಿಸಿದ್ದಾರೆ. ಬಳಿಕ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಕಣ್ಣೀರಿಡ್ತಿರೋದನ್ನ ಕಂಡ ಸಹ ಪ್ರಯಾಣಿಕರು ಟಿಸಿಯನ್ನ ತರಾಟೆಗೆ ತೆಗೆದುಕೊಂಡು ಎಳೆದಾಡಿದ್ದಾರೆ. ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್ ಆಗ್ತಿದ್ದು, ಟಿಸಿ ವರ್ತನೆ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಸಿ ಮದ್ಯಪಾನ ಮಾಡಿ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಹೇಳಲಾಗ್ತಿದೆ.
ಟಿಕೆಟ್ ಕಲೆಕ್ಟರ್ ಮಹಿಳೆಯೊಂದಿಗೆ ಗಲಾಟೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗ್ತಿದ್ದ ವೇಳೆ ಸಹ ಪ್ರಯಾಣಿಕರು ಆತನನ್ನ ಎಳೆದು ತಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವಾಗ ಈ ದೃಶ್ಯ ಎಲ್ಲೆಡೆ ವೈರಲ್ ಆಗಿ ಭಾರೀ ವಿರೋಧ ವ್ಯಕ್ತವಾಗಲು ಶುರುವಾಯ್ತೋ ತಕ್ಷಣ ಎಚ್ಚೆತ್ತ ರೈಲ್ವೇ ಅಧಿಕಾರಿಗಳು ಟಿಕೆಟ್ ಕಲೆಕ್ಟರ್ ಅನ್ನ ಕೆಲಸದಿಂದ ಅಮಾನತು ಮಾಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಅನ್ನೋ ಹಾಗೆ ಮಹಿಳೆ ಮೇಲೆ ಅಧಿಕಾರದ ದರ್ಪ ತೋರಿದ ಟಿಕೆಟ್ ಕಲೆಕ್ಟರ್ ಕೆಲಸ ಕಳೆದುಕೊಂಡು ಮನೆ ಸೇರಿದ್ದಾನೆ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…