ಚೆನ್ನೈ: ಮೂರನೇ ತರಗತಿಯ ವಿದ್ಯಾರ್ಥಿಗೆ ಹಿಂದಿ ಪದ್ಯ ಕಂಠಪಾಠ ಮಾಡಲಾಗದ ಕಾರಣ ಹಿನ್ನಲೆಯಲ್ಲಿ ಶಿಕ್ಷಕಿ ದೈಹಿಕ ಶಿಕ್ಷೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ರಾಜಾಜಿ ವಿದ್ಯಾಶ್ರಮ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ಶಾಲೆಯ ಆಡಳಿತ ಮಂಡಳಿಯು ಸೋಮವಾರ ಈ ಕುರಿತು ಸ್ಪಷ್ಟನೆ ನೀಡಿದ್ದು, “ಶಿಕ್ಷಕಿಯ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಲಾಯಿತು. ತನಿಖೆಯ ನಂತರ ಶಿಕ್ಷಕಿಯನ್ನು ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ತಿಳಿಸಿದೆ.

ಕಳೆದ ವಾರ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯ ಪೋಷಕರು ಈ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರು. ಶಾಲೆಯ ನಿಯಮಾವಳಿಯ ಪ್ರಕಾರ, ದೈಹಿಕ ಶಿಕ್ಷೆ, ಅವಹೇಳನ, ಭಾವನಾತ್ಮಕ ಹಿಂಸೆ ನೀಡುವ ಕ್ರಿಯೆಗಳನ್ನು ತೀವ್ರವಾಗಿ ತಡೆಹಿಡಿಯಲಾಗುತ್ತದೆ. ಶಾಲೆಯ ‘ಶೂನ್ಯ ಸಹಿಷ್ಣುತೆ’ ನೀತಿಯಂತೆ, ಶಿಕ್ಷಕಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ.

ಶಾಲಾ ಆಡಳಿತವು ಈ ಕುರಿತಂತೆ ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ಮತ್ತು ವಿದ್ಯಾರ್ಥಿಗಳ ಸುರಕ್ಷತೆ, ಕಲಿಕೆಯ ಅನುಕೂಲತೆಗಳಿಗೆ ಬದ್ಧವಾಗಿರುವುದಾಗಿ ತಿಳಿಸಿದೆ.

Leave a Reply

Your email address will not be published. Required fields are marked *

Related News

error: Content is protected !!