ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಬಿ ಆರ್ ಪಿ ಮತ್ತು ಸಿ ಆರ್ ಪಿ, ಶಿಕ್ಷಕರುಗಳು ಮೋದಿಕೇರ್ ಎಂಬ ಚೈನ್ ಲಿಂಕ್ ದಂಧೆಗೆ ಬಿದ್ದಿದ್ದು, ಅದರಲ್ಲಿ ಬರುವ ಕಮಿಷನ್ ಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಮೋದಿಕೇರ್ ಎಂಬುವುದು ಒಂದು ಚೈನ್ ಲಿಂಕ್ ಸಂಸ್ಥೆಯಾಗಿದ್ದು, ಇದರಲ್ಲಿ ಒಬ್ಬರು ಮತ್ತೊಬ್ಬರನ್ನು ಸೇರಿಸುತ್ತಾ ಹೋದಷ್ಟು ಹಾಗೂ ಸೇರಿಸಿದವರಲ್ಲಿ ಕೆಲವರು ಮೋದಿಕೇರ್ನಲ್ಲಿ ಸಿಗುವಂತಹ ವಸ್ತುಗಳನ್ನು ಕೊಂಡುಕೊಂಡಂತೆಲ್ಲಾ ಕಮಿಷನ್ ನೀಡುತ್ತಾರೆ. ಇದರ ಕಮಿಷನ್ ಆಸೆಗೆ ಬಿದ್ದ ಸಾಕಷ್ಟು ಶಿಕ್ಷಕರು ತಮ್ಮ ಕೆಲಸವನ್ನೇ ಮರೆತು ಬೆಳಗ್ಗೆ ರಾತ್ರಿ ಎನ್ನದೆ, ಮೋದಿಕೇರ್ ಸಂಸ್ಥೆಯನ್ನು ಬೆಳೆಸಲು ಮುಂದಾಗಿದ್ದಾರೆ.
ನೇತ್ರಾವತಿ .ಬಿ.ಆರ್.ಪಿ/ ಬಿ.ಆರ್.ಸಿ. ಕಚೇರಿ. ಮಧುಗಿರಿ ಹಾಗೂ ಪರಮೇಶ್. ಬಿ.ಆರ್.ಪಿ/ ಬಿ.ಆರ್.ಸಿ ಕಚೇರಿ, ಸಿರಾ. ಇವರುಗಳೂ ಸೇರಿದಂತೆ, ಹಲವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು, ತಾಲ್ಲೂಕಿನ ಹಲವು ಶಿಕ್ಷಕರಿಗೆ ಮೋದಿ ಕೇರ್ ದಂಧೆ ಮಾಡಲು ಪ್ರೇರೇಪಿಸುತ್ತಿದ್ದಾರೆ ಎಂಬ ವಿಚಾರ ಕೇಳಿ ಬಂದಿದ್ದು, ಇವರುಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ಚೈನ್ ಲಿಂಕ್ ಬ್ಯುಸಿನೆಸ್ ಮಾಡುತ್ತಿದ್ದಾರೆ.
ಇವರಿಬ್ಬರು ಮಾತ್ರವಲ್ಲದೆ ಈ ಜಾಲಕ್ಕೆ ಬಿದ್ದು, ತಮ್ಮ ಕೆಲಸವನ್ನೇ ಮರೆತಿರುವ ಸಾಕಷ್ಟು ಶಿಕ್ಷಕರಿದ್ದಾರೆ. ಈ ವಿಚಾರದ ಕುರಿತು ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರನ್ನು ಸಹ ನೀಡಿರುತ್ತಾರೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ತನಿಖೆಗೆ ಮುಂದಾಗಿರುವುದಿಲ್ಲ.
ಸರ್ಕಾರಿ ಹುದ್ದೆಯಲ್ಲಿದ್ದರೂ ಸಹ ಯಾವುದೋ ಸಂಸ್ಥೆಯೊಂದು ಕಮಿಷನ್ ಕೊಡುತ್ತದೆ ಎಂಬ ಕಾರಣಕ್ಕೆ ತಮ್ಮ ಕೆಲಸವನ್ನು ದುರುಪಯೋಗ ಪಡಿಸಿಕೊಂಡು ಶಿಕ್ಷಕರನ್ನೆಲ್ಲ ಪ್ರಚೋದಿಸುವುದು ಮಾತ್ರವಲ್ಲದೆ ತಾವು ಸಹ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ತಮ್ಮ ವೃತ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಶಿಕ್ಷಕರ ಬಗ್ಗೆ ಮೇಲಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಸರ್ಕಾರಿ ಕೆಲಸದಲ್ಲಿದ್ದರೂ ಸಹ ಪ್ರಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡದೆ ಹಣ ಕೊಟ್ಟವರ ಬೂಟುನೆಕ್ಕಲು ಮುಂದಾಗಿರುವ ಇಂತಹ ನಾಲಾಯಕ್ ಗಳನ್ನು ಈ ಕೂಡಲೇ ತನಿಖೆಗೆ ಒಳಪಡಿಸಿ ಅಮಾನತ್ತು ಮಾಡಬೇಕು.
ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯ ಬಳಿ ಹಲವು ದಾಖಲೆಗಳು ಲಬ್ಯವಿದ್ದು. ಪೂರ್ಣ ವಿವರವಾದ ವರದಿಯನ್ನು ಶೀಘ್ರವಾಗಿ ಪ್ರಕಟಿಸಲಾಗುವುದು.
1 thought on “ಮೋದಿಕೇರ್ ಎಂಬ ಚೈನ್ ಲಿಂಕ್ ದಂಧೆಗೆ ಬಿದ್ದಿರುವ ಮಧುಗಿರಿ, ಶಿರಾ ಶಿಕ್ಷಕರು.”
Comments are closed.