ಬಾಗಲಕೋಟೆ: ತಾಲೂಕಿನ ತಹಶೀಲ್ದಾರ್ ರಾದ ವಿನಯಕುಮಾರ್ ಪಾಟೀಲ್ ರವರು ದಿನಾಂಕ 17-09-2022 (ಶನಿವಾರ) ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ನಾಯನೇಗಲಿ ಗ್ರಾಮದಲ್ಲಿ ಡಿಸಿ ವಾಸ್ತವ್ಯವಿದ್ದು ಸ್ಥಳ ಪರಿಶೀಲನೆಗೆಂದು ಇಂದು ನಾಯನೇಗಲಿ ಗ್ರಾಮಕ್ಕೆ ಭೇಟಿ ನೀಡಿದರು.
ಆಗ ನಾಯನೇಗಲಿ ಹಾಗೂ ಮಂಕಣಿ ಗ್ರಾಮಗಳಲ್ಲಿ ಪಡಿತರ (ರೇಷನ್) ಸರಿಯಾಗಿ ಹಂಚಿಕೆಯಾಗುತ್ತಿಲ್ಲವೆಂಬ ವಿಷಯವನ್ನು ಗ್ರಾಮಸ್ಥರು ತಹಶೀಲ್ದಾರ್ ರವರಿಗೆ ತಿಳಿಸಿದರು. ಆಗ ತಹಶೀಲ್ದಾರ್ ರವರು ಪಡಿತರ ಹಂಚಿಕೆ ಮಾಡುತ್ತಿದ್ದ ಸ್ಥಳಕ್ಕೆ ಧಾವಿಸಿ ಸುಮಾರು ತಿಂಗಳುಗಳಿಂದ ಗ್ರಾಹಕರಿಗೆ ರೇಷನ್ ಸರಿಯಾಗಿ ಸಿಗುತ್ತಿಲ್ಲವೆಂಬುದನ್ನು ಪರಿಶೀಲನೆ ಮಾಡಿ ಮುಂದಿನ ತಿಂಗಳಿಂದ ಈ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ವರದಿ: ವಿಶ್ವನಾಥ ಭಜಂತ್ರಿ