ಕೋಲಾರ ಗಲ್ ಪೇಟೆ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ವೆಂಕಟರಾಮಪ್ಪ ರವರು ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯವರೊಡನೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗೋವುಗಳನ್ನು ಸಾಗಾಣಿಕೆ ಮಾಡಿ, ಕಟಾವು ಮಾಡುವ ದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿರುತ್ತಾರೆ.ಆರೋಪಿಗಳು ಲಾರಿಯೊಂದರಲ್ಲಿ ಎತ್ತುಗಳನ್ನು ಆಂದ್ರಪ್ರದೇಶದ ಅನಂತಪುರದಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬಂದು ಅವುಗಳನ್ನು ಕಠಾವು ಮಾಡುವ ಉದ್ದೇಶದಿಂದ ಕೋಲಾರದ ರಹಮತ್‌ನಗರದ ಶೆಡ್ ಒಂದರಲ್ಲಿ ಕೂಡುಹಾಕಿಕೊಂಡಿದ್ದರು. ಸರಿಯಾದ ವ್ಯವಸ್ಥೆ ಇರದ ಕಾರಣ ಮೂರು ಎತ್ತುಗಳು ಸತ್ತುಹೋಗಿದ್ದು ಈ ಅಮಾನವೀಯ ಕೃತ್ಯದ ಬಗ್ಗೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಳಿದ 17 ಎತ್ತುಗಳು, 2 ಎಮ್ಮೆ ಕರುಗಳು ಮತ್ರು 3 ಹಸು ಕರುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಗೋಶಾಲೆಗೆ ಬಿಡಲಾಗಿದೆ .
ವರದಿ : ರೋಶನ್