ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರು ರಾಜ್ಯದಲ್ಲೇ ಅತಿದೊಡ್ಡ ಖೋಟಾ ನೋಟು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ಪೊಲೀಸರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಲಕ್ಷಾಂತರ ಮೌಲ್ಯದ ಖೋಟಾ ನೋಟುಗಳು ಮತ್ತು ಅವು ಮುದ್ರಿಸಲು ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿಯ ಮೇರೆಗೆ, ನಗರದಲ್ಲಿ ಪೊಲೀಸರು ದಾಳಿ ನಡೆಸಿ ಈ ಅಕ್ರಮ ಚಟುವಟಿಕೆಗೆ ಸಂಬಂಧಿಸಿದ ಅಡ್ಡೆಯನ್ನು ಪತ್ತೆ ಹಚ್ಚಿದ್ದಾರೆ. ದಾಳಿಯ ವೇಳೆ, ವೈಟ್ ಪೇಪರ್ ಸೇರಿದಂತೆ ನಕಲಿ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈ ದಾಳಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಪಟಿಯಾಲಾದಲ್ಲಿ ಹಿರಿಯ ಸೇನಾ ಅಧಿಕಾರಿ ಪುಷ್ಪಿಂದರ್ ಸಿಂಗ್ ಬಾತ್ ಮತ್ತು ಅವರ ಮಗ ಅಂಗದ್ ಸಿಂಗ್ ಮೇಲೆ ಮೂವರು ಪಂಜಾಬ್…
ಒಡಿಶಾದ ಬಾಲಸೋರ್ ಜಿಲ್ಲೆಯ ಜಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಯಾಪಾಳ ಗ್ರಾಮದಲ್ಲಿ ನೊಂದ ಮಹಿಳೆಯ ನೆರೆಮನೆಯವನೊಬ್ಬ ಅತ್ಯಾಚಾರ ಎಸಗಿದ ಘಟನೆಯು…
ಪಾಕಿಸ್ತಾನ ಕ್ರಿಕೆಟಿಗ ರಜಾ ಹಸನ್ ಭಾರತ ಮೂಲದ ಹಿಂದೂ ಯುವತಿ ಪೂಜಾ ಬೊಮನ್ ಜೊತೆ ನ್ಯೂಯಾರ್ಕ್ನಲ್ಲಿ ಸೆಟಲ್ ಆಗಿದ್ದು, ಇವರ…
ಹೈದರಾಬಾದ್ನಲ್ಲಿ ವ್ಯಕ್ತಿಯೊಬ್ಬ ಪಶ್ಚಿಮ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರನ್ನು ಬಳಸಿಕೊಂಡು 2.8 ಕೋಟಿ ರೂ. ವಂಚನೆ ನಡೆಸಿದ ಘಟನೆ…
ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕೊಲ್ಲಲ್ಪಟ್ಟಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ…
ಮಹದೇವಪುರ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಅನಿತಾ ಕುಮಾರಿಯವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ…