ಕುಂದಗೋಳ; ರಾಜ್ಯಾದ್ಯಾಂತ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಸ ನಿರ್ವಹಣೆ ಮಾಡಬೇಕೆಂದು ಗ್ರಾಮೀಣ ಪ್ರದೇಶಗಳಲ್ಲಿ ಸರಕಾರ ಕಸ ನಿರ್ವಹಣೆ ಮಾಡುವುದರ ಜೊತೆಗೆ ತ್ಯಾಜ್ಯ ವಸ್ತುಗಳನ್ನು ಘಟಕದಲ್ಲಿ ಕ್ರೋಡೀಕರಿಸಿ ವಿಲೇವಾರಿ ಮಾಡಬೇಕೆಂದು ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಘನ ತ್ಯಾಜ್ಯ ನಿರ್ವಹಣ ಘಟಕ ಸ್ಥಾಪಿಸಿದೆ,

ಅದರಂತೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿ ಇದ್ದು, ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣತೊಡಗಿದೆ, ನಿರ್ಮಾಣಗೊಂಡು ಹಲವಾರು ದಿನಗಳು ಕಳೆದರು ಉದ್ಘಾಟನೆ ಭಾಗ್ಯ ಒಲಿದು ಬಂದಿಲ್ಲ.

ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಉದ್ಘಾಟನೆ ಹಂತಕ್ಕೆ ಬಂದು ತಲುಪಿದೆ. ಆದರೆ ಉದ್ಘಾಟನೆ ಮೊದಲು ಕಟ್ಟಡದ ಒಳಾಂಗಣದಲ್ಲಿ ಬಿರುಕು ಬಿಟ್ಟಿದೆ, ಅಂದರೆ ಕಳಪೆಗೆ ಹಿಡಿದ ಕೈಗನ್ನಡಿಯಾಗಿದೆ. ಘನತ್ಯಾಜ್ಯ ನಿರ್ವಹಣೆ ಘಟಕ ಬರೋಬ್ಬರಿ 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಆದರೆ ಎಲ್ಲೆಡೆ ಕಟ್ಟಡ ಒಳ ಭಾಗದಲ್ಲಿ ನೆಲಹಾಸು, ಗೋಡೆ ಬಿರುಕು ಬಿಟ್ಟಿದ್ದು, ಅಧಿಕಾರಿಗಳ ಆಲಕ್ಷೇತನವೋ? ಅಥವಾ ಗುತ್ತಿಗೆದಾರನ ನಿರ್ಲಕ್ಷತನವೋ?

ಕಟ್ಟಡದ ಹೊರಭಾಗದ ಜಾಹೀರಾತಿನಲ್ಲಿ ಕಸ ‘ಮರುಬಳಕೆ’ ಮಾಡಬೇಡಿ ಅಂತ ಚಿತ್ರ ಬಿಡಸಬೇಕೆು ಆದರೆ ಕಸ ಮರಬಳಕೆ, ಅಂತ ತಪ್ಪಾಗಿ ಬಿಡಿಸಿ ದ್ದಾರೆ, ಇನ್ನೂ ಘನ ತ್ಯಾಜ್ಯ ನಿರ್ವಹಿಸುವುದು ಹೇಗೆ? ಇದು ಸರಿ ಆದರೆ ಘನ ತ್ಯಾಜ್ಯ ನಿರ್ವಹಿಸುವುದು ಹೆಗೇ ಅಂತ ತಪ್ಪಾಗಿ ಚಿತ್ರಿಸಿದ್ದಾರೆ.

ಒಟ್ಟಿನಲ್ಲಿ ಕಟ್ಟಡ ಸಂಪೂರ್ಣಗೊಂಡಿದ್ದರು ಉದ್ಘಾಟನೆಯಾಗಿಲ್ಲ ಮತ್ತೊಂದೆಡೆ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟಿದ್ದರು ಅಧಿಕಾರಿಗಳು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ.

ವರದಿ:ಶಾನು ಯಲಿಗಾರ

error: Content is protected !!